Kalpana Nath

Classics Inspirational Others

3  

Kalpana Nath

Classics Inspirational Others

ದೊಡ್ಡವರ  ನಡೆ

ದೊಡ್ಡವರ  ನಡೆ

1 min
20


 

ತಮಿಳು ನಾಡಿನ ಒಂದು ಕಾಲಕ್ಕೆ ಮುಖ್ಯಮಂತ್ರಿ ಆಗಿದ್ದ ಕಾಮರಾಜ್ ಅವರ ಬಗ್ಗೆ ಬಹಳ ಜನಕ್ಕೆ ತಿಳಿದಿರುವುದಿಲ್ಲ. ಅವರ ಹತ್ತಿರ ಪದವಿಯಿಂದ ನಿರ್ಗಮಿಸುವಾಗ ಇದ್ದುದು ಒಂದು ಅಂಬಾಸಿಡರ್ ಕಾರು( ಅದೂ ಬ್ಯಾಂಕ್ ಸಾಲ,) ಅವರು ಹಾಕಿಕೊಳ್ಳುತ್ತಿದ್ದ ಆರು ಜುಬ್ಬಾ ಆರು ಪಂಚೆ ಮೂರು ಟವಲ್. ಇವರ ಬಗ್ಗೆ ಅನೇಕ ಸ್ವಾರಸ್ಯವಾದ ಪ್ರಸಂಗಗಳುಂಟು.ಒಂದು ಸಲ ಒಂದು ಹೊಸ ಬ್ರಿಡ್ಜ್ ಮಾಡುವ ಬಗ್ಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಪಾಸ್ ಮಾಡಿ, ನಂತರ ಇಂಜಿನಿಯರ್ ಗಳನ್ನು ಕರೆದು ಚರ್ಚಿಸಿದರಂತೆ. ಅದರಲ್ಲಿ ಬಹಳ ಬುದ್ದಿವಂತ ನೇರ ಮಾತನಾಡುವ ಯುವ ಇಂಜಿನಿಯರ್ ಒಬ್ಬ ಇದು ಅಸಾಧ್ಯವಾದ ಕೆಲಸ, ಮಾಡಿದರೆ ನಿಮಗೆ ಕೆಟ್ಟ ಹೆಸರು ಬರುವುದು ನಿಸ್ಸಂಶಯ ಅಂದುಬಿಟ್ಟನಂತೆ. ಮುಖ್ಯಮಂತ್ರಿಗಳಿಗೆ ಕೋಪ ಬಂದು ಹೊರಹೋಗಲು ಹೇಳಿದರಂತೆ. ಉಳಿದವರು ಸಮ್ಮತಿಸಿದರಂತೆ. ನಂತರ ಇವರಿಗೆ ಆಪ್ತ ರಾಗಿದ್ದ ಒಬ್ಬ ನಿವೃತ್ತ ಇಂಜಿನಿಯರ್ ಗೆ ಫೋನ್ ಮಾಡಿ ವಿಷಯ ತಿಳಿಸಿದರಂತೆ. ಅವರೂ ಸಹ ಈ ಪ್ರೊಜೆಕ್ಟ್ ಮಾಡದೇ ಇರುವುದೇ ಒಳ್ಳೆಯದು ಅಂದಾಗ ಇವರಿಗೆ ಒಂದುರೀತಿ ಸಂದಿಗ್ಧ ಸ್ಥಿತಿ. ಅಂದು ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಅವರ ಸೆಕ್ರೆಟರಿಗೆ ಫೋನ್ ಮಾಡಿ ಆ ಯುವ ಇಂಜಿನಿಯರ್ ಮನೆ ಎಲ್ಲಿದೆ ಎಂದು ಕೇಳಿ ತಕ್ಷಣ ತಿಳಿಸಲು ಹೇಳಿದಾಗ, ಈಗಾಗಲೇ ಅವರು ರಾಜೀನಾಮೆ ಕೊಟ್ಟು ಅವರ ಊರಿಗೆ ಹೊರಟು ಹೋಗಿದ್ದಾರೆಂದು ತಿಳಿಸಿದರು. ಅಂದಿನ ಮದರಾಸಿಗೆ ಸುಮಾರು ಐವತ್ತು ಕಿ. ಮೀ ದೂರದ ಹಳ್ಳಿ ಎಂದು ತಿಳಿಯಿತು. ತಮ್ಮ ಡ್ರೈವರ್ ನ ಕರೆದು ಯಾರಿಗೂ ಹೇಳದೆ ಹೊರಟೇ ಬಿಟ್ಟರು. ಸುಮಾರು ಹನ್ನೊಂದು ಗಂಟೆಯ ಹೊತ್ತಿನಲ್ಲಿ ಅವರ ಮನೆಗೆ ಬಂದಾಗ, ಮೊದಲು ಡ್ರೈವರ್ ಹೋಗಿ ಬಾಗಿಲು ತಟ್ಟಿದ. ಅವರ ತಾಯಿ ಬಾಗಿಲು ತೆರೆದು ಯಾರೆಂದು ಕೇಳಿದಾಗ ಮುಖ್ಯ ಮಂತ್ರಿಗಳು ಬಂದಿರುವ ವಿಷಯ ತಿಳಿಸಿದ. ಹಿಂದೆಯೇ ಅವರೂ ಬಂದು ಇಂಜಿನಿಯರ್ ಹತ್ತಿರ ಮಾತನಾಡಿ ನನ್ನಿಂದ ತಪ್ಪಾಗಿದೆ . ಕೋಪಮಾಡಿಕೊಳ್ಳಬೇಡ ಕೆಲಸಕ್ಕೆ ವಾಪಸ್ ಬರಬೇಕೆಂದು ಕೇಳಿಕೊಂಡರು. ಅವನು ಮಾತನಾಡಲಾಗದೆ ಕಾಲಿಗೆಬಿದ್ದನಂತೆ. ಅಂದಿನಿಂದ ಬಹಳ ಆಪ್ತರಲ್ಲಿ ಅವನೊಬ್ಬನಾದನಂತೆ. 


ಮತ್ತೊಮ್ಮೆ ಒಂದು ಕಾರ್ಯಕ್ರಮ. ಪ್ರಧಾನಮಂತ್ರಿಗಳ ಉಪಸ್ಥಿತಿ. ಮಾತನಾಡಲು ಸಭಾ ಮಂಟಪ ಹತ್ತುತ್ತಿದ್ದಾಗ ಅವರ ಆಪ್ತರು ಒಬ್ಬರು ಓಡಿಬಂದು ಕಿವಿಯಲ್ಲಿ ಏನೋ ಹೇಳಿದರು. ಏನೂ ಆಗಿಲ್ಲದ ಹಾಗೆ ಬೇಸರ ಪಟ್ಟುಕೊಳ್ಳದೆ ಎಡಗಡೆ ಭುಜದ ಮೇಲಿನ ಟವಲ್ ತೆಗೆದು ಬಲಭುಜದ ಮೇಲೆ ಹಾಕಿ ಕೊಂಡರು. ಭಾಷಣವೂ ಮುಗಿಯಿತು. ಪ್ರಧಾನಿಯನ್ನ ಕಳುಹಿಸಿ ಕೊಟ್ಟಮೇಲೆ ಅಲ್ಲೇ ತಂದಿದ್ದ ಬೇರೆ ಶರ್ಟ್ ಎಲ್ಲರ ಮುಂದೆಯೇ ಬದಲಾಯಿಸಿದರು. ಅಲ್ಲಿಯವರೆಗೂ ಬಹಳ ಜನಕ್ಕೆ ಗೊತ್ತಾಗಿರಲಿಲ್ಲ. ಅದುಬಟ್ಟೆ ಒಗೆದು ಇಸ್ತ್ರಿಮಾಡಿದ ಧೋಬಿ ಹರಿದ ಅಂಗಿಯನ್ನ ಹಾಗೇ ತಂದು ಕೊಟ್ಟ ಕಾರಣ. ಅದನ್ನ ನೋಡದೆ ಹಾಗೇ ಧರಿಸಿ ಬಂದಿದ್ದರು .ಆದರೆ ಅವನಿಗೆ ಇಸ್ತ್ರಿ ಮಾಡುವಾಗ ನೋಡಬಾರದೇ. ನಾನು ಪ್ರಧಾನಿ ಜೊತೆ ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು ಅಂತ ಸ್ವಲ್ಪವೂ ಕೋಪ ಮಾಡಿಕೊಳ್ಳದೆ ಹೇಳಿದರಂತೆ. ಅಂತಹ ವ್ಯಕ್ತಿಗಳು ರಾಜಕೀಯದಲ್ಲಿ ಇಂದು ಧುರ್ಲಭ.


Rate this content
Log in

Similar kannada story from Classics