ದೇವಿ
ದೇವಿ
ಅಂದು ನವರಾತ್ರಿ ಯ ಏಳನೇ ದಿನ.ಕಾಳರಾತ್ರಿಯ ಪೂಜಾ ಸಮಯದಲ್ಲಿ ಹೆಣ್ಣು ಮಕ್ಕಳು ಕಿತ್ತಳೆ ಬಣ್ಣದ ಸೀರೆ ಗಳನ್ನು ಉಟ್ಟು, ಹಣೆಗೆ ಅಗಲವಾದ ಕುಂಕುಮ ಇಟ್ಟು, ತಲೆತುಂಬಾ ಮಲ್ಲಿಗೆ ಯ ಮಾಲೆ ಹಾಕಿಕೊಂಡು ತಮ್ಮ ಸುತ್ತಲೂ ಕಂಪನ್ನು ಸೂಸುತ್ತಾ ದೇವಿಯ ಪೂಜೆಯ ಸಂಭ್ರಮದಲ್ಲಿ ಓಡಾಡುತ್ತಿದ್ದರು. ಒಂದೇ ಬಣ್ಣದ ಉಡುಗೆ ತೊಡುಗೆಯಲ್ಲಿ ಓಡಾಡುತ್ತಿದ್ದ ಹೆಣ್ಣು ಮಕ್ಕಳನ್ನು ತಮ್ಮ ಮನೆಯವರಾರು?,ಬೇರೆಯವರು?, ಎಂದು ಗುರುತಿಸುವುದೇ ಗಂಡಸರಿಗೆ ಕಷ್ಟವಾಗುತ್ತಿತ್ತು.
ಅಲ್ಲಿಗೆ ಬಂದಿದ್ದ ಸುಮಾರು ಮೂವತ್ತು ವರ್ಷದ ಅವಿವಾಹಿತ ಯುವತಿ, ಕಿತ್ತಳೆ ಬಣ್ಣಕ್ಕೆ ಕೆಂಪು ಜರಿ ಯ ಸೀರೆ, ಹಣೆಯಲ್ಲಿ ಅಗಲವಾದ ಕೆಂಪು ಕುಂಕುಮ, ಉದ್ದವಾದ ಜಡೆ, ಮಲ್ಲಿಗೆ ಮಾಲೆ ,ಧರಿಸಿ ದೈವೀ ತೇಜಸ್ಸಿನಿಂದ ಕೂಡಿದ್ದಳು. ಅವಳು ಅಲ್ಲಿಗೆ ಬಂದ ಕೂಡಲೇ ಎಲ್ಲರ ನೋಟವೂ ಅವಳೆಡೆ ತಿರುಗಿತು. ಪೂಜಾ ನಡೆಯುವ ಸಮಯದಲ್ಲಿ ಮುಂದೆ ಬಂದು ದೇವಿಗೆ ಆರತಿಯ ಮಾಡುತ್ತಿದ್ದ ಸಮಯದಲ್ಲಿ ಅವಳಲ್ಲಿ ಒಂದು ರೀತಿಯ ದೈವೀ ಭಾವ ಉಂಟಾಗಿ ,ಹಾಗೇ ಭಕ್ತಿ ಪರವಶಳಾದಾಗ ಅವಳ ಹತ್ತಿರ ಕೆಲವರು ಬಂದು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಉತ್ತರ ಪಡೆಯುತ್ತಿದ್ದರು.
ಸಾಕ್ಷಾತ್ ದುರ್ಗಾ ಪರಮೇಶ್ವರಿ ಅವಳಲ್ಲಿ ಹೊಕ್ಕು ಕೆಲವು ಸಮಯಗಳ ವರೆಗೆ ಭಕ್ತರ ಕಷ್ಟಗಳಿಗೆ ಪರಿಹಾರ ನೀಡುತ್ತಾರೆಂದು ಅಲ್ಲಿಗೆ ಬಂದಿದ್ದ ಭಕ್ತರು ನಂಬಿದ್ದರು. ಆ ಸಮಯದಲ್ಲಿ ದೇವಿಯು ಅವಳ ಮೂಲಕ ಕೊಡುತ್ತಿದ್ದ ಪರಿಹಾರಗಳಿಂದ ಭಕ್ತರು ಸಂತುಷ್ಟರಾಗುತ್ತಿದ್ದರು.
ಇಂತಹ ದೈವೀ ಪವಾಡಗಳು ಇಂದಿಗೂ ನಡೆಯುತ್ತಿದೆ ಎನ್ನುವುದು ಸತ್ಯ ಹಾಗೂ ಭಕ್ತರ ನಂಬಿಕೆ.
