STORYMIRROR

Gireesh pm Giree

Abstract Children Stories Inspirational

3  

Gireesh pm Giree

Abstract Children Stories Inspirational

ಡಿಗ್ರಿ ಲೈಫ್ ಶುರು ಗುರು

ಡಿಗ್ರಿ ಲೈಫ್ ಶುರು ಗುರು

2 mins
371


ಮತ್ತೆ ಹೆಗಲಿಗೆ ಬ್ಯಾಗು ಏರುವ ಸಮಯ ಸನಿಹಸುತ್ತಿದೆ. ಗೆಳೆಯರೊಂದಿಗೆ ಬರೀ ಮೊಬೈಲ್ ಚಾಟ್ ನಲ್ಲಿ ಹಾಗೊಮ್ಮೆ ಹೀಗೊಮ್ಮೆ ನೆನಪಿನ ಪುಟಗಳನ್ನು ವಿನಿಮಯ ಮಾಡಿಕೊಳ್ಳುವ ಬದಲು ಕ್ಲಾಸ್ ರೂಮಿನಲ್ಲಿ ಕೂತು ಪಾಠ-ಪ್ರವಚನ ಆಲಿಸುವ ಗಳಿಗೆ ಬರಲು ಕೆಲವು ಸಂಚಿಕೆಗಳು ಕಾದರೆ ಸಾಕು. ಹೊಸ ಕನಸನ್ನು ಹೊತ್ತು ಬರುವ ವಿದ್ಯಾರ್ಥಿಗಳಿಗಂತೂ ಎಲ್ಲಿಲ್ಲದ ಉತ್ಸಾಹ ಹೇಗಿದೆ ಈ ಕಾಲೇಜು ಹೇಗಿದ್ದಾರೆ ಇಲ್ಲಿನ ಸೀನಿಯರ್ಸ್, ಅದ್ಯಾಪಕರು ಯಾವ ಶೈಲಿಯಲ್ಲಿ ಪಾಠ ಮಾಡುತ್ತಾರೆ ಎನ್ನುವ ಕುತೂಹಲ ಅವರಲ್ಲಿರುತ್ತದೆ. ಕಾಲೇಜು ಪ್ರಾರಂಭಕಾಗಿಯೇ ಅದೆಷ್ಟು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಜೊತೆಗೆ ಮನಸ್ಸಿನ ಸಣ್ಣ ಮೂಲೆಯಲ್ಲೊಂದು ಅಳುಕು ಕೂಡ ಇದೆ ನನ್ನೊಳಗೆ. ಇನ್ನೂ ಕಾಲೇಜಿನಲ್ಲಿ ಕಳೆದಷ್ಟು ಸಮಯ ಇನ್ನು ಕಳೆಯಲು ಸಾಧ್ಯವಿಲ್ಲ ಒಮ್ಮೆ ಕಾಲೇಜು ಬಿಟ್ಟು ಹೋದರೆ ನಾನು ಓದಿದ ಕ್ಲಾಸ್ರೂಮ್ ಅಕ್ಕಪಕ್ಕದಲ್ಲಿ ಗೆಳೆಯರೊಂದಿಗೆ ಕಳೆದ ಮಧುರ ಕ್ಷಣವನ್ನು ಒಮ್ಮೆ ನೆನೆದಾಗ ಇನ್ನು ಬರೀ ಅಷ್ಟೇ ತಿಂಗಳು ನಾವುಗಳು ಜೊತೆಯಲ್ಲಿ ಇರುವುದೆಂಬ ಸತ್ಯ ಮನವನ್ನು ನೋಯಿಸುತ್ತದೆ.

    ಕಾಲವೇ ಹಾಗಲ್ಲವೇ ಹೊಸತಾದ ವಸ್ತು ಹಳತಾಗಲೇ ಬೇಕು ಹಾಗೆ ವಿದ್ಯಾರ್ಥಿ ಜೀವನವು ಕೂಡ ಒಮ್ಮೆ ಕಾಲೇಜು ಸೇರಿದ ಮೇಲೆ ನಮ್ಮ ವಿದ್ಯಾಭ್ಯಾಸ ಕಳೆಯುತ್ತಿದ್ದಂತೆಯೇ ನೆನಪಿನ ಪುಟಗಳ ಪುಸ್ತಕವನ್ನು ಹೊತ್ತು ಹೊರಬರಲೇಬೇಕು. ಇದು ನಿರಂತರ. ಆದರೂ ಅದನ್ನೆಲ್ಲವನ್ನೂ ಸವಿದು ಸವಿದ ಭಾವನೆಗಳನ್ನು ಪದಗಳಿಗೆ ಇಳಿಸಿ ಅದಕ್ಕೆ ಅಕ್ಷರವ ಪೋಣಿಸಿ ನೆನಪಿನ ಆ ದಿನಗಳನ್ನು ನೆನಪಲ್ಲಿ ಇಟ್ಟು ಅದನ್ನು ಬರೆಯಬಹುದೆಂಬ ಸಮಾಧಾನ ನನ್ನಲ್ಲಿದೆ. ಸೀನಿಯರ್ಸ್ ಎಂಬ ಪಟ್ಟ ನಮಗೆ ಒದಗಿದ ಭಾಗ್ಯ ಒಂದು ಕಡೆಯಾದರೆ ದಿನಗಳು ಕಳೆದಂತೆ ಡಿಗ್ರಿ ಜೀವನವೇ ಮುಗಿಯುವ ಸನಿಹ ಬಂದಿದೆ ಎಂಬ ಕಹಿ ಸತ್ಯ ನಿಜಕ್ಕೂ ಬೇಸರ ತಂದಿದೆ. ತನಗೆ ಏನೂ ಅರಿಯದ ದಡದಿಂದ ಪಯಣ ಆರಂಭಿಸಿದ ನನಗೆ ಕೊನೆಗೆ ಸಿಕ್ಕಿದ್ದು ಜ್ಞಾನಭಂಡಾರ ಗುರು-ಶಿಷ್ಯರ ನಡುವಿನ ಅನುಬಂಧದ ಸಾಗರದ ಸಮಾಗಮ . ತಪ್ಪನ್ನು ತಿದ್ದಿ ಸದಾ ಧೈರ್ಯ ಉತ್ಸಾಹವನ್ನು ತುಂಬುವ ಅಧ್ಯಾಪಕರು ಸಿಕ್ಕಿದ್ದು ನಮಗೊದಗಿದ ಭಾಗ್ಯವೇ ಸರಿ. 


ಈ ಬಾರಿ ದೀಪಾವಳಿಗೆ ಸಿಕ್ಕಿದ ಉಡುಗೆರೆ ಏನೆಂದರೆ ಅದು ಡಿಗ್ರಿ ಕಾಲೇಜು ಆರಂಭ ಅಲ್ವಾ ಗೆಳೆಯರೇ?. ಮತ್ತೆ ಕಾಲೇಜಿನಲ್ಲಿ ಗಂಟೆಯ ನಾದ, ದಲ್ಲಿ ಸವಿ ಸವಿ ತಿಂಡಿಯ ಗಮಗಮ ಪರಿಮಳ ರುಚಿಯಾದ ಸ್ವಾದ, ಕ್ಯಾಂಪಸ್ನಲ್ಲಿ ತೇಲಾಡುವ ನೀಲ ಹಕ್ಕಿಯ ಓಡಾಟ, ಕ್ಲಾಸ್ ರೂಮ್ ನಲ್ಲಿ ಆಗೊಮ್ಮೆ-ಈಗೊಮ್ಮೆ ಹೊಡೆದಾಟ, ಇದರ ನಡುವೆಯೇ ಆಗೊಮ್ಮೆ ಈಗೊಮ್ಮೆ ಬರುವ ಪರೀಕ್ಷೆ ಕಾಟ, ಮೈದಾನದಲ್ಲಿ ಮನಸಾದರೆ ಕ್ರಿಕೆಟ್ ವಾಲಿಬಾಲ್ ಆಟ ಅಬ್ಬಾ ಎಷ್ಟೊಂದು ಬಗೆಯ ಔತಣಕೂಟ ಇನ್ನೂ ಕಾದಷ್ಟು ದಿನ ಕಾಯಬೇಕಿಲ್ಲ . ಬನ್ನಿ ಗೆಳೆಯರೇ ಕಾಲೇಜಿಗೆ ಹೋಗುವ.


ಕೊನೆಗೆ ನಾನು ಹೇಳುವುದು ಇಷ್ಟೇ ಹೊಸದೊಂದು ಆಸೆ ಆಕಾಂಕ್ಷೆ ಹೊತ್ತು ಅಪ್ಪ ಅಮ್ಮನ ಒತ್ತಾಯಕ್ಕೊ ಅಥವಾ ತನ್ನ ಸ್ವಂತ ಆಸಕ್ತಿಯಿಂದ ಕಲಿಯಲು ನೀವು ಕಾಲೇಜಿಗೆ ಬರುತ್ತೀರಾ. ಇಲ್ಲಿ ಮೋಜು ಮಸ್ತಿ ಮಾಡುವ ಜೊತೆಗೆ ಕಲಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು ಅದನ್ನು ಅಳವಡಿಸಿಕೊಳ್ಳಬೇಕು. ಜೂನಿಯರ್ಸ್ ತಾವು ಕಾಣುವ ಕನಸು ನನಸಾಗಲೆಂದು ನಾನು ಆಶಿಸುತ್ತೇನೆ.




Rate this content
Log in

Similar kannada story from Abstract