Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಚಿಕ್ಕ ಕುಟುಂಬ

ಚಿಕ್ಕ ಕುಟುಂಬ

1 min
289


ಮನೆಯಲ್ಲಿ ತನ್ನ ಮದುವೆಯ ಪ್ರಯತ್ನ ನಡೆಯುತ್ತಿದ್ದಾಗ, ತಾನು ಎಂತಹ ಮನೆ ಸೇರಬೇಕೆಂದು, ತನ್ನನ್ನು ಬಿಟ್ಟು ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಕೊಡುತ್ತಿದ್ದುದ್ದನ್ನು ಕೇಳಿಸಿಕೊಳ್ಳುತ್ತಿದ್ದ ಸೀಮಾಳಿಗೆ ನಗು ಬರುತ್ತಿತ್ತು. 

ಅಪ್ಪ ನಿಗೆ ಮಗಳನ್ನು ಮನೆ ತುಂಬಾ ಜನಗಳಿವರುವ ಕೂಡು ಕುಟುಂಬದ ಸಿರಿವಂತ ಮನೆತನಕ್ಕೆ 

 ಕೊಡಬೇಕು ಎಂಬ ಗುರಿಯಾಗಿದ್ದರೆ, ಅಮ್ಮ ನಿಗೆ ತನ್ನಂತೆ ತನ್ನ ಮಗಳನ್ನು ಕೂಡು ಕುಟುಂಬಕ್ಕೆ ಕೊಡುವುದು ಬೇಡ ವೆಂದು ಹೇಳುತ್ತಿದ್ದಳು. ಅಣ್ಣ ನಿಗೆ ತಂಗಿಯನ್ನು ವಿದೇಶದಲ್ಲಿ ರುವ

ಒಳ್ಳೆಯ ಸಾಫ್ಟವೇರ್ ಇಂಜಿನಿಯರ್ ಗೆ ಮದುವೆ ಮಾಡಿಕೊಡಬೇಕೆಂದು ಹಠ. ತಮ್ಮ ನಿಗೆ ತನ್ನ ಅಕ್ಕನ ಗಂಡ, ಸಿನಿಮಾ ಸ್ಟಾರ್ ತರಹ ನೋಡಲು ತುಂಬಾ 

ಸ್ಮಾರ್ಟ್ ಆಗಿರಬೇಕೆಂಬ ಆಸೆ.

ಅಬ್ಬಬ್ಬಾ ತಾನು ಮದುವೆಯಾಗುವ ಗಂಡು

ಹೇಗಿರಬೇಕೆಂದು ತನ್ನನ್ನು ಯಾರೂ ಕೇಳದಿದ್ದಾಗ,

ಸೀಮಾಗೆ ಸಿಟ್ಟು ಬಂದು, ತಾನು ತನಗೆ ಬೇಕಾದವರನ್ನು ತಾನೇ ಹುಡುಕಿಕೊಳ್ಳುತ್ತೇನೆಂದು ಹೇಳಿದಾಗ, ಅವಳ ಅಪ್ಪ ನಿಗೆ ಆತಂಕವಾಯಿತು.

ಕೊನೆಗೂ ಸೀಮಳ ಅಮ್ಮನ ಆಸೆಯಂತೆ ಮಗಳಿಗೆ ಒಬ್ಬನೇ ಮಗನಾಗಿರುವ ಚಿರಾಗ್ ಜೊತೆ ಮದುವೆ ಸೆಟ್ ಆದಾಗ ಅವಳಿಗೆ ತುಂಬಾ ಖುಷಿ ಆಯಿತು.

ಕಡೆಗೂ ತಾಯಿಯ ಇಚ್ಛೆ ಯಂತೆ ಸೀಮಾಳಿಗೆ ಚಿಕ್ಕ ಕುಟುಂಬದ ಮನೆಯ ಚಿರಾಗ್ ನೊಂದಿಗೆ ಮದುವೆ ಯಾದಾಗ,ಸೀಮಾಳ ತಾಯಿಗೆ ಖುಷಿಯಾಗಿತ್ತು.


ಮುಂದೆ ಮಗಳ ಬಸಿರು ಬಾಣಂತನ,ಅವಳ ಮಗುವಿನ ಆರೈಕೆ ಅಂತ ಎಲ್ಲದಕ್ಕೂ ಮಗಳು ತಾಯಿಯ ಮನೆಗೇ ಅಂಟಿಕೊಳ್ಳುತ್ತಾ ಹೋದಾಗ, ಸೀಮಾಳ ತಾಯಿಗೆ ಸಾಕಾಗಿ ಹೋಗುತ್ತಿತ್ತು. ಆಗ ತಾನು ಮಗಳನ್ನು ಕೂಡು ಕುಟುಂಬಕ್ಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೊಳ್ಳುತ್ತಿದ್ದಳು.


Rate this content
Log in

Similar kannada story from Abstract