Vijayalaxmi C Allolli

Abstract Classics Others

4.5  

Vijayalaxmi C Allolli

Abstract Classics Others

ಬೆಳದಿಂಗಳು

ಬೆಳದಿಂಗಳು

2 mins
375



ಕಡು ಬಡತನದ ಜೀವನ ಸಾಗಿಸುತ್ತಿದ್ದ ಧರಿಣಿಗೆ ಇಬ್ಬರು ಗಂಡು ಮಕ್ಕಳಿದ್ದರು.ಬೆಳಗ್ಗೆಯಿಂದ ಕೂಲಿ ಮಾಡಿದರೂ ಮೂವರ ಹೊಟ್ಟೆ ತುಂಬಿಸಲು ಪರದಾಡುತ್ತಿದ್ದಳು.ಊರಲ್ಲಿ ಯಾರ ಮನೆಯಲ್ಲಾದರೂ ಕಾರ್ಯಕ್ರಮಗಳಿದ್ದಾಗ ಕೊನೆಗೆ ಅನ್ನ ಉಳಿದಿದೆ ಊಟಕ್ಕೆ ಬನ್ನಿ ಎಂದು ಕರೆದಾಗ ಹೋಗಿ ಊಟ ಮಾಡಿ ಬರುತ್ತಿದ್ದರು.ಒಂದು ದಿನ ಧರಿಣಿ ಸುಸ್ತಾಗಿ,ಆರೋಗ್ಯ ಕೆಟ್ಟು ಹಾಸಿಗೆ ಹಿಡಿದಳು.ಕೂಡಿಟ್ಟ ಹಣದಿಂದ ಒಂದುವಾರದ ಊಟಕ್ಕೆ ಏನೂ ತೊಂದರೆ ಆಗಲಿಲ್ಲ.ಒಂದು ವಾರ ಕಳೆದ ನಂತರ ಊಟಕ್ಕೆ ಏನೂ ಇಲ್ಲವಾಯಿತು.ಎರಡು ದಿನ ಉಪವಾಸವಿರಬೇಕಾಯಿತು.ಮೂರನೆ ದಿನಕ್ಕೆ ಊರಲ್ಲಿ ಒಬ್ಬರ ಮನೆಯ ಕಾರ್ಯಕ್ರಮವಿದ್ದು ಊಟಕ್ಕೆ ಕರೆದರು.

ಆಗ ಧರಿಣಿ ತನ್ನ ಮಕ್ಕಳನ್ನು ಕರಿದು,"ರವಿ ಮತ್ತೆ ಶಶಿ ಹೋಗಿ ಅವರ ಮನೆಯಲ್ಲಿ ಊಟ ಮಾಡಿ,ನನಗೂ ಸ್ವಲ್ಪ ತೆಗೆದುಕೊಂಡು ಬನ್ನಿ"ಎಂದಳು...


ರವಿ ಮತ್ತು ಶಶಿ ಮೂರುದಿನದ ಹಸಿವು ಇಂಗುವಷ್ಟು ಊಟ ಮಾಡಿದರು.ಊಟದ ಕೊನೆಗೆ ಶಶಿ ಸ್ವಲ್ಪ ಅನ್ನವನ್ನು ತಾಯಿಗಾಗಿ ತೆಗೆದುಕೊಂಡ.ರವಿ ಏನನ್ನು ತೆಗೆದುಕೊಳ್ಳಲಿಲ್ಲ.ಇಬ್ಬರೂ ಸೇರಿ ಮನೆಗೆ ಹೋದರು,ಹಾಸಿಗೆಯಲ್ಲಿ ಮಲಗಿದ್ದ ತಾಯಿಯ ಹತ್ತಿರ ಹೋಗಿ ಶಶಿ ತಾನು ತಂದ ಸ್ವಲ್ಪವೆ ಸ್ವಲ್ಪ ಅನ್ನವನ್ನು ತಾಯಿಗೆ ಕೊಟ್ಟ.ಅದನ್ನು ಸೇವಿಸಿದ ತಾಯಿಗೆ ಮೂರು ದಿನದ ಹಸಿವು ಇಂಗಲಿಲ್ಲ.ರವಿ ನೀನು ತಂದಿರುವ ಅನ್ನ ಕೊಡು ಎಂದು ಧರಿಣಿ ಕೇಳಿದಳು.


ಆಗ ರವಿ,"ಹೋಗಮ್ಮ ನನ್ನ ಹೊಟ್ಟೆ ತುಂಬಿಕೊಳ್ಳುವಷ್ಟರಲ್ಲಿ ಅನ್ನ ಖಾಲಿ ಆಯ್ತು ನಿನಗೆ ಹೇಗೆ ತರಲಿ ಎಂದ" ಈ ಮಾತುಗಳನ್ನು ಕೇಳಿದ ತಾಯಿ

'ನೀನು ತಾಯಿಹೊಟ್ಟೆಯನ್ನು ತಂಪು ಮಾಡಲಿಲ್ಲ,ನೀನು ಉರಿಯುತ್ತಾ ಇರು'ಎಂದು ಹಿಡಿಶಾಪ ಹಾಕಿದಳು.


'ಎಷ್ಟಾದರಿಷ್ಟು ತಾಯಿಯೂ ಉನ್ನಲಿ ಎಂದು ಅನ್ನ ತಂದಿದ್ದ ಶಶಿಗೆ,ತಾಯಿ ಹೊಟ್ಟೆ ತಂಪು ಮಾಡಿದ್ದಕ್ಕೆ ತಿಂಗಳಲ್ಲಿ ಹದಿನೈದು ದಿನವಾದರೂ ನಿನ್ನ ಕೈಲಾದಷ್ಟು


ಎಲ್ಲರಿಗೂ ತಂಪಾದ ಬೆಳಕನ್ನು ನೀಡು'ಎಂದು ಆಶಿರ್ವದಿಸಿದಳು...


ಇದರಿಂದಾಗಿಯೆ ಸೂರ್ಯ ಉರಿಯುತ್ತಾ,ಧಗಧಗಿಸುತ್ತಾ ಪ್ರಜ್ವಲಿಸುತ್ತಾನೆ.ಆದರೆ ಚಂದ್ರ ಕಣ್ಣಿಗೆ ತಂಪನ್ನು,ಮನಸ್ಸಿಗೆ ಹಿತವನ್ನು ನೀಡುತ್ತಾ ಸೌಮ್ಯ ರೀತಿಯಲ್ಲಿ ಬೆಳಗುತ್ತಾನೆ.


ಎಂದು ಅಮ್ಮ ಈ ಕಥೆಯನ್ನು ಭರತಹುಣ್ಣಿಮೆಯ ಬೆಳದಿಂಗಳಲ್ಲಿ ಕೈ ತುತ್ತು ಕೊಡುತ್ತಾ ಹೇಳಿದರು...


ನಾವು ಚಿಕ್ಕವರಿದ್ದಾಗ ಹುಣ್ಣಿಮೆಯ ಚಂದ್ರನ ಬೆಳಕಲ್ಲಿ ಊಟ ಮಾಡುತ್ತಾ,ಆಕಾಶ,ಸೂರ್ಯ,ಚಂದ್ರ,ನಕ್ಷತ್ರಗಳ ಬಗ್ಗೆ ಕಾಲ್ಪನಿಕ ಕಥೆಗಳನ್ನು ಕೇಳುತ್ತಾ.ಅದೇಕೆ ಹೀಗೆ? ಯಾಕೆ? ಏನು? ಅಂತಾ ಪ್ರಶ್ನೆಗಳನ್ನು ಕೇಳುತ್ತಾ ಬಾಲ್ಯವನ್ನು ಕಳೆದಿದ್ದೇವು.ಇಂದಿನ ಮಕ್ಕಳಲ್ಲಿ ಇದ್ಯಾವುದರ ಅರಿವು ಇರುವುದಿಲ್ಲ,ಅರಿವು ಮೂಡಿಸಲು ನಮ್ಮಂಥ ಪಾಲಕರಿಗೆ ವ್ಯವಧಾನವೂ ಇರುವುದಿಲ್ಲ...


ಇಂತಹ ಕಾಲ್ಪನಿಕ ಮತ್ತು ನೀತಿ ಕಥೆಗಳನ್ನು ಚಿಕ್ಕ ವಯಸ್ಸಿನಲ್ಲೆ ಕೇಳಿದ್ದರು ಅವುಗಳ ಪ್ರಭಾವ ನಮ್ಮ ಜೀವನದೂದ್ದಕ್ಕೂ ಬೀರಿವೆ..

ನಮ್ಮ ನಡೆ ನುಡಿಗಳಿಗೆ ತಕ್ಕಂತೆ ನಮ್ಮ ಫಲಗಳು ದೊರೆಯುತ್ತವೆ.ಉತ್ತಮರಿಗೆ ಉತ್ತಮ ಫಲದೊರೆತರೆ,ದುಷ್ಟರಿಗೆ ಕ್ಷಣಿಕ ಸುಖ ದೊರೆತರು ಕಡೆಯ ದಿನಗಳಲ್ಲಿ ದರಿದ್ರತನ ಬೆನ್ನು ಹತ್ತಿ ಮಾಡಿದ ಪಾಪ ಕೆಲಸಗಳಿಗೆ ತಕ್ಕ ಪ್ರಾಯಶ್ಚಿತವನ್ನು ಅನಭವಿಸಿಯೆ ಹೋಗುತ್ತಾರೆ.


ಇಂದಿನ ಮಕ್ಕಳಿಗೆ ನೀತಿ ಕಥೆ,ಕಾಲ್ಪನಿಕ ಕಥೆಗಳನ್ನು ಹೇಳಿದರೆ ಅವುಗಳ ಪ್ರಭಾವ ಬೀರುವುದು ಕಡಿಮೆಯೆ..ಕಣ್ಣಮುಂದೆ ಬಣ್ಣ ಬಣ್ಣದ ವಿಡಿಯೋಗಳನ್ನು ನೋಡುವ ಇವರಿಗೆ ಇಂತಹ ಕಥೆಗಳು ಇಷ್ಟವಾಗುವುದಿಲ್ಲ.ಇಷ್ಟ ಪಟ್ಟು ಕೇಳುವ ಮಕ್ಕಳು ಇರುವುದು ಕಡಿಮೆಯೆ...ಕೇಳುವುದೆ ಇಲ್ಲ ಎಂದ ಬಳಿಕ ಇನ್ನೂ ಅಳವಡಿಸಿಕೊಳ್ಳುವ ಮಾತೆಲ್ಲಿ...



ಸ್ಮಾರ್ಟಫೋನ್ ಯುಗದಲ್ಲಿ ಎಲ್ಲರೂ ಸ್ಮಾರ್ಟ ಆಗಿ ಇರೊವಾಗ ಕತ್ತಲೆ,ಬೆಳದಿಂಗಳ ಬೆಳಕಿನ ಅವಶ್ಯಕತೆಯಾದರೂ ಏಕೆ? ಒಮ್ಮೆಯಾದರೂ ನಮ್ಮ ಮಕ್ಕಳಿಗೆ ತಿಂಗಳ ಬೆಳದಿಂಗಳನ್ನು ತೋರಿಸುತ್ತಾ ಕೈತುತ್ತು ನೀಡೊಣಾ...ನೀವು ಏನಂತಿರಾ????




Rate this content
Log in

Similar kannada story from Abstract