Shridevi Patil

Classics Inspirational Others

4  

Shridevi Patil

Classics Inspirational Others

ಅವಳೂ ತಾಯಿಯೇ. ಭಾಗ 2

ಅವಳೂ ತಾಯಿಯೇ. ಭಾಗ 2

2 mins
395



ಕಲಾವತಿ ಮತ್ತು ಅವಳ ಅಕ್ಕ ಇಬ್ಬರೂ ಸಹ ಒಂದು ದಿನವೂ ಶಾಲೆಯ ಮೆಟ್ಟಿಲು ಏರಿದವರಲ್ಲ , ಶಾಲೆ ಕಡೆ ಮುಖ ಮಾಡಿದವರಲ್ಲ. ಹಾಗಂತ ಅವರಿಗೆ ಓದುವ ಆಸೆ ಇರಲಿಲ್ಲ ಅಂತ ಏನಿಲ್ಲ , ಆದರೆ ಅವರ ಮನೆಯ ಪರಿಸ್ಥಿತಿ ಆಗ ಹಾಗಿತ್ತು. ಆರೋಗ್ಯ ಹದಗೆಟ್ಟು , ಹುಷಾರಿಲ್ಲದ ಕಲಾವತಿಯ ತಾಯಿ ಒಂದು ಕಡೆಯಾದರೆ , ಕಿತ್ತು ತಿನ್ನುವ ಆ ಕೆಟ್ಟ ಬಡತನ ಇನ್ನೊಂದು ಕಡೆಗೆ , ಕುಡಿತದ ಚಟಕ್ಕೆ ದಾಸನಾದ ಅಪ್ಪ ಮತ್ತೊಂದು ಕಡೆಗೆ . ಹೀಗಿರುವಾಗ ಎಲ್ಲಿಯ ಶಾಲೆ , ಎಲ್ಲಿಯ ಓದು .


ಕಲಾವತಿಯ ಅಕ್ಕನಿಗೆ ಹಾಗೂ ಕಲಾವತಿಗೆ ಸುಮಾರು ಒಂದು ಏಳೆಂಟು ವರ್ಷದ ಅಂತರವಿತ್ತು. ಹೀಗಾಗಿ ಅವಳ ಅಮ್ಮ ಹುಷಾರಿಲ್ಲದೆ ಹಾಸಿಗೆ ಹಿಡಿದಿದ್ದರಿಂದ ತಂಗಿಗೆ ಅಕ್ಕನೆ ಅಮ್ಮನಾಗಿ ನೋಡಿಕೊಂಡಿದ್ದಳು. ಅಕ್ಕ ಅಮ್ಮನಾಗಿ , ತಂಗಿಯ ಪ್ರತಿಯೊಂದನ್ನು ನೋಡಿಕೊಂಡು ,ಕೂಲಿಯನ್ನು ಮಾಡುತ್ತ ಅಮ್ಮನನ್ನು ನೋಡಿಕೊಳ್ಳುತ್ತಿದ್ದಳು.


ಹೀಗಿರುವಾಗ ಆ ದೇವರು ಕಲಾವತಿಯ ತಾಯಿಯನ್ನು ತನ್ನತ್ತ ಕರೆಸಿಕೊಳ್ಳುತ್ತಾನೆ. ಆಗ ಕಲಾವತಿ ಇನ್ನು ಚಿಕ್ಕವಳು. ಸುಮಾರು ಆರು ,ಏಳು ವರ್ಷದವಳು ಅಷ್ಟೇ. ಪಾಪಾ ಏನೂ ಗೊತ್ತಿಲ್ಲದ ವಯಸ್ಸಲ್ಲಿ ಅಮ್ಮನನ್ನು ಕಳೆದುಕೊಂಡು , ಅಕ್ಕನೊಂದಿಗೆ , ಕುಡುಕ ತಂದೆಯೊಂದಿಗೆ ಆ ಬಡತನದ ಕರಿ ಛಾಯೆಯಲ್ಲಿ ಬದುಕುತ್ತಿದ್ದಳು.


ಇಂತಹ ಪರಿಸ್ಥಿತಿಯಲ್ಲಿ ಕುಡುಕ ಅಪ್ಪನಿಗೆ ಅದ್ಯಾರು ಹೆಣ್ಣು ಕೊಟ್ಟರೋ ಕಾಣೆ , ಸುದ್ದಿ ಗದ್ದಲ ಇಲ್ಲದೆ ಅದೊಂದು ದಿನ ಮದುವೆ ಮಾಡಿಕೊಂಡು ಬಂದು ಇಬ್ಬರು ಹೆಣ್ಣು ಮಕ್ಕಳ ಮುಂದೆ ಹಾಜರ್ ಆಗ್ತಾನೆ. ಆಗ ಇಬ್ಬರು ಅಕ್ಕ ತಂಗಿಯರು ಆಶ್ಚರ್ಯದಿಂದ ತಮ್ಮ ಕಣ್ಣನ್ನು ತಾವೇ ನಂಬದಾದರು. ಇನ್ನೇನು ದೊಡ್ಡ ಮಗಳು ಮೈನೆರೆಯಲು ಬರುವ ವಯಸ್ಸಾಗಿದ್ದಾಗ , ಅಪ್ಪ ಹೇಳದೆ ಕೇಳದೆ ಮದುವೆ ಆಗಿ ಬಂದರೆ ಇನ್ನೇನಾಗುತ್ತದೇ ಹೇಳಿ...



ಅಕ್ಕ ತಂಗಿಯರಿಬ್ಬರು ಮುಖ ಮುಖ ನೋಡಿಕೊಂಡು ,ತಮ್ಮ ಅಮ್ಮನ ಜಾಗದಲ್ಲಿ ಹೊಸ ಅಮ್ಮನನ್ನು ಕಂಡು ಬೇಜಾರಿದ್ದರೂ ಸಹ , ಅದರಲ್ಲೇ ಸಂತೋಷ ಖುಷಿಯನ್ನು ಕಂಡುಕೊಂಡರು. ಅಮ್ಮ ಇದ್ದಾರಲ್ಲ ಸಾಕು ಎನ್ನುವ ಸಮಾಧಾನ ಮಾಡಿಕೊಂಡರು.


ಆದರೆ ಆ ಎರಡನೆಯ ತಾಯಿ , ಎರಡನೆಯ ತಾಯಿಯಾಗಿಯೇ ಇರುತ್ತಿದ್ದಳು. ಅಂದರೆ ಈ ಇಬ್ಬರನ್ನು ಒಂಥರಾ ಕಾಣುತ್ತಿದ್ದಳು. ತನ್ನ ಗಂಡನೊಂದಿಗೆ ತಾನು ಮಾತ್ರ ಇರಲು ಇಷ್ಟ ಪಡುತ್ತಿದ್ದಳು. ತುಚ್ಛವಾಗಿ ಈ ಇಬ್ಬರನ್ನು ಕಾಣುತ್ತ ಮನೆಕೆಲಸ ಮಾಡಿಸುತ್ತ ತಾನು ಆರಾಮಾಗಿ ಇರುತ್ತಿದ್ದಳು . ಊಟವನ್ನು ಸಹ ಹೊಟ್ಟೆ ತುಂಬುವವರೆಗೆ ಕೊಡುತ್ತಿರಲಿಲ್ಲ. ದುಡ್ಡಿನ ಬೆಲೆ ನಿಮಗೇನು ಗೊತ್ತು , ಹಾಗೆ ಹೀಗೆ ಅಂತೆಲ್ಲ ಬೈಯ್ದು ದರ್ಪ ದೌಲತ್ತಿನಿಂದ ಮೆರೆಯುತ್ತ ಈ ಇಬ್ಬರನ್ನು ದುಡಿಸಿಕೊಳ್ಳುತ್ತ ತಾನು ಆರಾಮಾಗಿ ಇರುತ್ತಿದ್ದಳು.


ಅಕ್ಕ ತಾಯಾಗಿ ಇದ್ದಿದ್ದರಿಂದ ಕಲಾವತಿಯು ಸ್ವಲ್ಪ ಚಿಕ್ಕಮ್ಮನ ದೃಷ್ಟಿಯಿಂದ ತಪ್ಪಿಸಿಕೊಳ್ಳುತ್ತಿದ್ದಳು. ಇಲ್ಲವಾದರೆ ನಾಕೇಟು ಬಿದ್ದು , ಅಮ್ಮ ನೆನಪಾದರೂ ಸಹ ಅಕ್ಕನ ಮಡಿಲಲ್ಲಿ ಮಲಗಿ ಅಳುತ್ತಾ ತನ್ನ ಅಮ್ಮನನ್ನು ಅಕ್ಕನಲ್ಲಿ ಕಾಣುತ್ತಿದ್ದಳು .


ಮತ್ತು ಯಥಾ ಪ್ರಕಾರ ಬೆಳಗಾದರೆ ಅದೇ ಕತೆ. ಹೀಗಾಗಿ ಬರು ಬರುತ್ತ ಕಲಾವತಿಗೆ ಇದು ರೂಢಿಯಾಗಿ ಹೋಯಿತು. ಹೊಡೆಸಿಕೊಳ್ಳುವುದು , ಅರ್ಧಂಬರ್ಧ ಊಟ ಮಾಡುವುದು , ಅಳುವುದು , ಇವೆಲ್ಲ ಮೈಗೂಡಿ ಬಿಟ್ಟವು...


ಕಲಾವತಿಯ ಮುಂದಿನ ಜೀವನದ ಕುರಿತು ಮುಂದಿನ ಭಾಗದಲ್ಲಿ ನೋಡೋಣ.


Rate this content
Log in

Similar kannada story from Classics