Vijaya Bharathi

Abstract Classics Others

3  

Vijaya Bharathi

Abstract Classics Others

ಅತ್ತೆ ಗೊಂದು ಕಾಲ ಸೊಸೆಗೊಂದು ಕಾಲ

ಅತ್ತೆ ಗೊಂದು ಕಾಲ ಸೊಸೆಗೊಂದು ಕಾಲ

3 mins
676


ಅಂದು ಬಚ್ಚಲಿನಲ್ಲಿ ಕಾಲು ಜಾರಿ ಬಿದ್ದು ಸೊಂಟ ಮುರಿದು ಕೊಂಡು ಬಿದ್ದಿದ್ದ ಪಾತಮ್ಮ ನವರನ್ನು

ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಗೆ ಫೋನ್ ಮಾಡಿ ದ ಮಗ ರಾಮು.


ತನ್ನ ಹೆಂಡತಿ ವೈದೇಹಿ ಯು ಕಡೆ ಒಮ್ಮೆ ನೋಡಿ,ಅವಳೂ ಜೊತೆಗೆ ಬರುವಳಾ ಎಂದು ಖಾತ್ರಿ ಪಡಿಸಿಕೊಂಡಾಗ,ಅವಳ ಮುಖದ ಇಂಗಿತವನ್ನು ಗ್ರಹಿಸಿ ತಾನೊಬ್ಬನೇ ಹೊರಡುವುದು ಸೂಕ್ತ, ಎಂದುಕೊಂಡ.ಅಮ್ಮನಿಗೂ ಹೆಂಡತಿ ಗೂ ಎಣ್ಣೆ ಸಿಗೇಕಾಯಿ ಅನ್ನೋದು ಈ ಹತ್ತು ವರ್ಷಗಳ ಲ್ಲಿ ಅವನಿಗೆ ತಿಳಿಯದಿರುವ ವಿಷಯ ವಲ್ಲ.


ಆದರೆ ವೈದೇಹಿಯ ಯೋಚನೆಯೇ ಬೇರೆ ಇತ್ತು. ತನ್ನ ಅತ್ತೆ ತನ್ನನ್ನು ಹತ್ತು ವರುಷಗಳಿಂದಲೂ ಕೂತರೆ ತಪ್ಪು ನಿಂತರೆ ತಪ್ಪು ಅಂತ ದಿನ ಬೆಳಗಾದರೆ ತನ್ನನ್ನು ಯಾವುದಾದರೊಂದು ಕಾರಣಕ್ಕೆ ಬಯ್ದು ಹಂಗಿಸದಿದ್ದರೆ ಅವರಿಗೆ ತಿಂದ ಅನ್ನ ಮೈಗೆ ಹತ್ತ್ತುತ್ತಿರಲಿಲ್ಲವೆಂಬ ವಿಷಯ ಅವಳಿಗೆ ಗೊತ್ತಿರುವುದೇ ಆದರೂ, ಮಾನವೀಯತೆ ಯ ದೃಷ್ಟಿಯಿಂದ ಅವರೊಂದಿಗೆ ಜೊತೆಗೆ ಹೋಗಿ ಬರುವುದೇ ಸರಿ ಎಂದು ಯೋಚಿಸುತ್ತಿರುವಾಗಲೇ,ಪಾತಮ್ಮ ನವರ ಪ್ರಲಾಪ ಮತ್ತೆ ಶುರುವಾಯಿತು.


"ಅಯ್ಯೋ ರಾಮ,ನಿನ್ನ ಹೆಂಡತಿ ಸರಿಯಾಗಿ ಬಚ್ಚಲು ತಿಕ್ಕಿರಲಿಲ್ಲ ಕಣೋ,ಅದಕ್ಕೇ ನೋಡು ನನಗೆ ಈ ಗತಿ ಬಂತು. ಅವಳಿಗೆ ಈಗ ನೆಮ್ಮದಿ ಆಗಿರಬೇಕು ನೋಡು. ನನ್ನನ್ನು ಈ ರೀತಿ ನೋಡಲು ಎಷ್ಟು ದಿನಗಳಿಂದ ಕಾಯುತ್ತಿದ್ದಳೋ?,ಇನ್ನು ನಾನು ಹಾಸಿಗೆ ಹಿಡಿದರೆ ನನ್ನ ಸೇವೆಯನ್ನು ನೀನೇ ಮಾಡಬೇಕು ಮಗ, ಈ ಮೂದೇವಿ ನ ಏನೂ ಅಂತ ಇಷ್ಟ ಪಟ್ಟು ಪ್ರೀತಿಸಿ ಮದುವೆ ಆದ್ಯೋ?ನನ್ನ ಅಣ್ಣ ನ ಮಗಳು ಲಕ್ಷೀ ನ ನಿನಗೆ ತಂದುಕೊಂಡಿದ್ದಿದ್ದರೆ ಎಷ್ಟು ಲಕ್ಷಣವಾಗಿ ನನ್ನನ್ನು ನೋಡ್ಕೊತಿದ್ದಳೋ?, ಅಯ್ಯೋ ನನಗೆ ಈ ನೋವು ತಡೆಯುವುದಕ್ಕೆ ಆಗ್ತಿಲ್ಲ ಕಣೋ...."


ಒಂದೇ ಸಮನೆ ಹೆಂಡತಿಯನ್ನು ನಿಂದಿಸುತ್ತಿದ್ದ ಅಮ್ಮ ನನ್ನು ನೋಡಿ ರಾಮುವಿಗೂ ರೇಗಿ ಹೋಯಿತು.

"ಅಮ್ಮ, ನೀನು ಈಗ ಸುಮ್ಮನಿರ್ತೀಯಾ,ಇಂತಹ ಸಮಯದಲ್ಲೂ ನೀನು ವೈದೇಹಿ ಗೆ ಏನಾದರೂ ಹೇಳದಿದ್ದರೆ ಸಮಾಧಾನ ಇಲ್ವಾ? ಇನ್ನೇನು ಆಂಬುಲೆನ್ಸ್ ಬಂದು ಬಿಡುತ್ತದೆ ಸ್ವಲ್ಪ ತೆಗೆದುಕೋ"ರಾಮು ಹೇಳುತ್ತಿದ್ದಂತೆಯೇ ಮನೆ ಮುಂದೆ ಆಂಬುಲೆನ್ಸ್ ಬಂತು.


ಪಾತಮ್ಮನವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ರಾಮು. ಆಂಬುಲೆನ್ಸ್ ಹೊರಟು ನಂತರ ಮನೆಯೊಳಗೆ ಬಂದು ಬಾಗಿಲು ಹಾಕಿ ಸೋಫಾದ ಮೇಲೆ ಕುಳಿತು ನಿಧಾನವಾಗಿ ತನ್ನ ಶ್ವಾಸಗಳನ್ನು ಎಳೆದುಕೊಂಡ ವೈದೇಹಿ ಗೆ ಇಡೀ ಮನೆಯೇ ಅತ್ಯಂತ ಪ್ರಶಾಂತ ವಾಗಿ ಕಂಡಿತು. ಈ ಮನೆಗೆ ಕಾಲಿಟ್ಟ ದಿನದಿಂದ ಹಿಡಿದು ಹತ್ತು ವರ್ಷಗಳ ವರೆಗೂ ನಿರಂತರವಾಗಿ ಪಾತಮ್ಮ ನವರ ಕೆಂಗಣ್ಣಿಗೆ ಗುರಿಯಾಗಿ ಹೈರಾಣಾಗಿ ಹೋಗಿದ್ದ ವೈದೇಹಿ ಗೆ ಇಂದು ಒಂದು ರೀತಿ ಸಮಾಧಾನ ಸಿಕ್ಕಂತಾಯಿತು. ಸೊಸೆಯ ಮೇಲೆ ಏನಾದರೊಂದು ಗೂಬೆ ಕೂರಿಸುತ್ತಾ,ಮಗನ ಹತ್ತಿರ ಇಲ್ಲ ಸಲ್ಲದ ಚಾಡಿ ಹೇಳಿ ಇಬ್ಬರ ನಡುವೆ ಜಗಳ ತಂದಿಕ್ಕಿ,ಮಜ ತೆಗೆದುಕೊಳ್ಳುತ್ತಾ ,ಸೊಸೆಯ ಸ್ವಾತಂತ್ರ್ಯ ವನ್ನೇ ಕಿತ್ತು ಕೊಂಡಿದ್ದ ಪಾತಮ್ಮ ನವರ ಬುದ್ದಿ ಯನ್ನು ಸಹಿಸಿ ಸಾಕಾಗಿದ್ದ ವೈದೇಹಿ ಗೆ ಈಗ ಅತ್ತೆ ಯ ಮೇಲೆ ಸೇಡು ತೀರಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ಸಿಕ್ಕಿತ್ತು.


ಎಪ್ಪತ್ತರ ಹರೆಯದ ಪಾತಮ್ಮ ನವರ ಸೊಂಟ, ತಾತ್ಕಾಲಿಕ ವಾಗಿ ರಿಪೇರಿ ಯಾದರೂ,ಅವರಿಗೆ ಸ್ವತಂತ್ರವಾಗಿ ಏನೂ ಮಾಡಿಕೊಳ್ಳಲಾಗದೆ,ಸದಾ ಹಾಸಿಗೆಗೆ ಅಂಟಿಕೊಂಳ್ಳುವಂತಾಯಿತು.


ಈಗ ವೈದೇಹಿಯ ಸರದಿ ಬಂತು. ಪಾತಮ್ಮ ನವರ ಸೇವೆ ತನ್ನ ಕೈಯಿಂದ ಆಗದು ಎಂದು ಖಡಾಖಂಡಿತವಾಗಿ ತನ್ನ ಗಂಡನಲ್ಲಿ ಹೇಳಿದಾಗ ಅವಳಿಗೆ ಮೊದಲ ಹೆಜ್ಜೆ ಯ ಜಯ ಸಿಕ್ಕಂತಾಯಿತು. ತನ್ನ ಅಮ್ಮ ತನ್ನ ವೈದೇಹಿಗೆ ಕೊಟ್ಟ ಹಿಂಸೆಯನ್ನು ತಿಳಿದಿದ್ದ ರಾಮು ,ತನ್ನ ತಾಯಿಯ ಸೇವೆ ಗಾಗಿ, ಒಬ್ಬ ನರ್ಸ್ ಗೊತ್ತು ಮಾಡಿದ್ದನು.ನಿಗಧಿತ ವೇಳೆಯಲ್ಲಿ ನರ್ಸ್ ಬಂದು ಪಾತಮ್ಮ ನವರ ದಿನಚರಿ ಗೆ ಸಹಾಯ ಮಾಡಿ,ಹೋಗಿಬಿಟ್ಟರೆ ಉಳಿದಂತೆ ವೈದೇಹಿಯೇ ಅವರ ಕಡೆ ಗಮನ ಕೊಡಬೇಕಾಗುತ್ತಿತ್ತು.


ನರ್ಸ್ ಇಲ್ಲದ ಸಮಯದಲ್ಲಿ ವೈದೇಹಿ ಅತ್ತೆ ಯನ್ನು ಬಾತ್ ರೂಂ ಗೆ ಕರೆದುಕೊಂಡು ಹೋಗಬೇಕಾಗುತ್ತಿದ್ದಾಗ, ವೈದೇಹಿ ಬೇಕಂತಲೇ ನಿಧಾನ ಮಾಡುತ್ತಿದ್ದಳು. ಅವರು ಮೂರು ನಾಲ್ಕು ಬಾರಿ ಕರೆದಾಗ ಸಿಡುಕತ್ತಲೇ ಹೋಗುತ್ತಿದ್ದಳು. ಕೆಲವು ಬಾರಿ ವೈದೇಹಿ ಹೋಗುವ ವೇಳೆಗೆ ಹಾಸಿಗೆಯಲ್ಲೇ ಒಂದು ಎರಡು ಆಗಿ ಹೋಗಿದ್ದರೆ,

ಅವರಿಗೆ ಹಿಗ್ಗಾ ಮುಗ್ಗಾ ಬಯ್ಗಳಗಳ ಸುರಿಮಳೆಯೇ ಆಗುತ್ತಿತ್ತು.


"ನೋಡಿ ಅತ್ತೆ ಮ್ಮ,ನೀವು ನಾನು ನನ್ನ ಚೊಚ್ಚಲ ಬಸುರಿ ಯಾಗಿದ್ದಾಗ ,ಬಸುರಿ ಎಂಬುದನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದಲ್ಲ ಒಂದು ಕೆಲಸ ಹಚ್ಚುತ್ತಲೇ ಇರುತ್ತಿದ್ದಿರಿ. ಅಷ್ಟು ದುಡಿದರೂ, ಸಮಯಕ್ಕೆ ಸರಿಯಾಗಿ ತಿಂಡಿ ಕೊಡದೆ, ಅಳಿದುಳಿದ ಸೀಕಲು ತಿಂಡಿಗಳನ್ನು ಒಂದು ಕಡೆ ಇಟ್ಟಿರುತ್ತಿದ್ದಿರಿ. ಒಂದು ದಿನವಂತೂ ಎಂಟು ತಿಂಗಳು ತುಂಬಿ ಹೋಗಿದ್ದಾಗ ,ನನ್ನ ಕೈಯಲ್ಲಿ ಏನೂ ಮಾಡಲಾಗುವುದಿಲ್ಲವೆಂದಾಗ,ಕೆಲಸ ಮಾಡಿದರೆ ಮಾತ್ರ ಊಟ ತಿಂಡಿ,ಇಲ್ಲದಿದ್ದರೆ ಉಪವಾಸ ಸಾಯಿ ಎಂದು ಬೈದಿದ್ದನ್ನು ನಾನು ಹೇಗೆ ಮರೆಯಲಿ?,ನನ್ನ ಬೆನ್ನ ಹಿಂದೆ ನನ್ನ ಗಂಡನಿಗೆ ಚಾಡಿ ಹೇಳಿ, ನಮ್ಮಿಬ್ಬರ ನಡುವೆ ಏನಾದರೊಂದು ಜಗಳ ಹೊತ್ತಿಸಿ ದೂರದಲ್ಲಿ ನಿಂತು ನಗುತ್ತಿದ್ದುದನ್ನು ನಾನು ಹೇಗೆ ಮರೆಯಲಿ? ಆಗೆಲ್ಲಾ ನಾನು ಅಳುತ್ತಾ ನನ್ನ ಅಮ್ಮ ನ ಹತ್ತಿರ ಹೇಳಿಕೊಂಡಾಗ ,ನನಗೆ ಸಮಾಧಾನ ಮಾಡಿದ ಅಮ್ಮ ವೈದೇಹಿ,ಇಂದು ನಿನ್ನನ್ನು ಹೀಗೆ ಹೊಟ್ಟೆ ಉರಿಸುತ್ತಿರುವ ನಿನ್ನ ಅತ್ತೆ,ಒಂದು ದಿನ ನಿನ್ನ ಕೈಕೆಳಗೆ ಬೀಳುವಾಗ ಅವರಿಗೆ ತಾವು ಮಾಡಿದ ತಪ್ಪು ತಿಳಿಯುತ್ತದೆ .ಈಗ ಅವರ ಕಾಲ. ನಿನಗೂ ಒಂದು ಕಾಲು ಬರುತ್ತದೆ ಎಂದು ಸಮಾಧಾನ ಮಾಡಿದ್ದಳು.ಈಗ ನನ್ನ ಕಾಲ ಅತ್ತೆ ಮ್ಮ.


"ಅತ್ತೆ ಗೊಂದು ಕಾಲ ಸೊಸೆಗೊಂದು ಕಾಲ'"ಎಂಬ ಗಾದೆ ಎಂದೂ ಸುಳ್ಳಾಗುವುದಿಲ್ಲ.'".



Rate this content
Log in

Similar kannada story from Abstract