JAISHREE HALLUR

Classics Inspirational Others

4  

JAISHREE HALLUR

Classics Inspirational Others

**= ಅಪ್ಪ-ಅಮ್ಮ=**

**= ಅಪ್ಪ-ಅಮ್ಮ=**

1 min
370



ನನ್ನಮ್ಮ ನನ್ನ ಹೊತ್ತು ಬೀದಿಯಲಿ

ನಡೆವಾಗ ನೆರಳಾಗಿದ್ದ ಅಪ್ಪ ಛತ್ರಿಯಂತೆ..


ನಾ ಭುವಿಗೆ ಕಾಲಿಟ್ಟಂತೆ ನೆರಳಾದ ಅಪ್ಪ ನನಗಷ್ಟೇ..


ನಾ ಹಸಿವೆಂದರೆ ತಡಕಾಡಿ ಬೇಡಿ

ತರುತಿದ್ದ ತಿಹಿತಿಂಡಿಯ..


ನಾ ಬೇಡವೆಂದೊಮ್ಮೆ ಹಟಮಾಡಿದೊಡೆ ಅಮ್ಮನಕ್ಕರೆ..


ನಾ ಹೆಜ್ಜೆಯಿಟ್ಟು ನಡೆವಾಗ ಬೆರಳಿನಾಸರೆಯಾದ ಅಪ್ಪ..


ನಾ ಕಲಿಕೆಯಲಿ ನುರಿತಾಗ ಅಮ್ಮ 

ಸಂತಸದಿ ಬೀಗಿದ್ದಳು...


ನಾ ಬೇಸರದಿ ನೊಂದಾಗ ಕಂಡರಿಯದ ಗಾಭರಿಯಿಬ್ಬರಿಗೂ


ನಾ ಕೋಪದಿಂ ನುಡಿವಾಗ ಕಾಣದಂತೆ

ನೊಂದ ಜೀವಗಳು..


ನಾ ಮುದದಿ ಅಪ್ಪಿದಾಗ ಅವರ ಮನಸು ಸ್ವರ್ಗಕ್ಕೆ ಲಗ್ಗೆ..


ನಾ ಹರುಷದಿ ನಲಿದಾಗ ಎಲ್ಲಿಲ್ಲದಾನಂದ ಬಾಳಿನಲಿ..


ನಾ ಓದಲೆಂದಾಗ ಪಾಡುಪಟ್ಟರೂ

ಒಂದಿಷ್ಟೂ ಸಾಲವಿಲ್ಲದೆ 

ಒಂದಿಷ್ಟೂ ಆತಂಕವಿಲ್ಲದೆ ಅನವರತ

ಕಲಿಸಿದರು, ಬೆಳೆಸಿದರು.


ನಾ ಬರೆವ ಪತ್ರಕೆ ಕಾತರಿಸುತ್ತಿದ್ದ

ಅಪ್ಪ ಇನ್ನಿಲ್ಲದಂತೀಗ


ನಾ ಮದುವೆಯಾದಂದು ಕಣ್ಣೀರಕೋಡಿ ಹರಿಸಿದ್ದರವರು

ಬೆನ್ನಮೇಲಿನ ಭಾರ ಹೆಚ್ಚಾಯಿತೆಂದು.


ನನ್ನೊಡನಾಡಿಗಳ ಜತನ ಮಾಡಲು

ಹೆಣಗುವುದೇ ಆಗಿತ್ತು ಅಂದು


ನನ್ನಿರವ ನೆನೆದು ಪರಿತಪಿಸಿದರೆಷ್ಟೋ ದಿನ, ಅರಿವಾಗಲಿಲ್ಲ ಎನಗೆ


ನಾ ಮರೆತುಹೋದೆ ಸಂಸಾರದೊಳಗೆ

ನನ್ನವರಿಗದೇ ಚಿಂತೆಯಾಗಿತ್ತು.


ಭೌವ್ಯ ಬದುಕದು ನನ್ನ ಬಾಲ್ಯದ ಕ್ಷಣಗಳ ಸುಖಸೋಪಾನಗಳು


ಗಮನಿಸಿದರೆಲ್ಲ ವೇಧ್ಯ ಎಷ್ಟೊಂದು

ಗೊಂದಲವಿತ್ತೆಂದು..


ಅವ್ವ ಮಾತ್ರ ಒಂದಿನವೂ ಗೊಣಗಲಿಲ್ಲ

ಅಪ್ಪನೊಡನೆ ಕೋಪಿಸಿದರೂ ಮಾತು ಬಿಡಲಿಲ್ಲ,

ಉಪವಾಸವಿದ್ದರೂ ಕಾಸು ಕೇಳಲಿಲ್ಲ, ನನಗೆ ನೆನಪುಂಟು ಇಷ್ಟೂ.


ಕೈಲಿದ್ದ ಪುಸ್ತಕವಷ್ಟೇ ಸಾಕಿತ್ತು ನನಗೆ

ಪರೀಕ್ಷೆಗಳಲಿ , ಜಯಿಸಬೇಕೆಂಬ ಉತ್ಕಟ ಬಯಕೆ..ಕಾಯಕವ ಪಡೆದು

ಸಂಸಾರನೊಗವ ಹೊರುವಾಸೆಯಿತ್ತು.


ಈಗೆಷ್ಟೋ ನಿರಾಳ, ಬದುಕು ಹಸನ..

ಮಾಗಿದ್ದು ಬೀಗಿದ್ದು ಎಲ್ಲವೂ ಅಮ್ಮನೇ


ಬೆಂದು ಮಣ್ಣುಪಾಲಾದದ್ದು ಅಪ್ಪನಾದರೆ, ನಾ ಬದುಕಿಯೇ 

ಬೇಯುತಿರುವೆ ಅವರ ಋಣ ತೀರಿಸಲಾರದೆ...


ಇದೂ ಸಹ ನನ್ನ ಕರ್ಮವೆನ್ನಲೇ, 

ದೇವನ ಮರ್ಮವೆನ್ನಲೇ..

ಅಂತೂ ಅಮ್ಮನೊಲುಮೆಯಲಿ ಎನಿತು ಸುಖವು ಬಣ್ಣಿಸಲಾಗದ್ದು..


(ನನ್ನವ್ನನ ನೆನಪಲ್ಲಿ..ಬದುಕಿನ ಮೆಲುಕುಗಳು)


Rate this content
Log in

Similar kannada story from Classics