STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಅಪಘಾತ

ಅಪಘಾತ

1 min
382

ನಾನ್ ಸ್ಟಾಪ್ ನವೆಂಬರ್ ಆವೃತ್ತಿ 3 ಬಿಗಿನರ್

ದಿನ ೨೨

ವಿಷಯ : ನಾನು ಯಾರು ?


ಅಂದು ಆಫೀಸ್ ಗೆ ತರಾತುರಿಯಲ್ಲಿ ಹೋಗುವಾಗ ಅನಂತ್ನ ಬೈಕಗೆ ಎದುರಿಗೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದು ಅವನು ಕೆಳಕ್ಕೆ ಬಿದ್ದಾಗ, ಬೈಕ್ ಅವನ ಮೇಲೆ ಬಿದ್ದು, ತಲೆಗೆ ತುಂಬಾ ಪೆಟ್ಟಾಯಿತು. ಸುತ್ತ ಮುತ್ತಲಿನ ಜನರೆಲ್ಲರೂ ಸೇರಿ ಅವನನ್ನು ಹ ತ್ತರದ ಆಸ್ಪತ್ರೆಗೆ ಸೇರಿಸಿ, ಅವನ ಮೊಬೈಲ್ ಲ್ಲಿದ್ದ ಅವನ ಮನೆಯ ನಂಬರ್ಗೆ ಫೋನ್ ಮಾಡಿ ವಿಷಯ ತಿಳಿಸಿದರು. ವಿಷಯ ತಿಳಿದ ಕೂಡಲೆ ಅವನ ಅಪ್ಪ, ಅಮ್ಮಅಣ್ಣ ತಂಗಿ ಎಲ್ಲರೂ ಆಸ್ಪತ್ರೆಗೆ ಧಾವಿಸಿದರು. 

ಅನಂತ್ಗೆ ಡೀಪ್ ಹೆಡ್ ಇಂಜುರಿ ಆಗಿದ್ದರಿಂದ ಅವನಿಗೆ ಮೂರು ದಿನವಾದರೂ ಪ್ರಜ್ಞೆ ಬರಲಿಲ್ಲ. ಅವನ ಮನೆಯ ಎಲ್ಲರಿಗೂ ತುಂಬಾ ಚಿಂತೆಯಾಯಿತು. 

ದೇಹಕ್ಕೆ ಆಗಿದ್ದ ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ಕೊಟ್ಟಿದ್ದರು. ಆದರೆ ನಾಲ್ಕು ದಿನಗಳು ಕಳೆದರೂ ಅನಂತ್ ಗೆ ಪ್ರಜ್ಞೆಬಾರದೇ ಹೋದಾಗ, ಎಲ್ಲರಿಗೂ ಗಾಬರಿಯಾಯಿತು. 

ಕಡೆಗೆ ಅವನನ್ನು ಟ್ರೀಟ್ ಮಾಡುತಿದ್ದ ನರರೋಗ ತಜ್ಞರೊಂದಿಗೆ ಅನಂತ್ ನ ತಂದೆ ಮಾತನಾಡಿದಾಗ,ಅನಂತ್ ನ ಮಿದುಳಿಗೆ ಬಲವಾದ ಪೆಟ್ಟು ಬಿದ್ದಿದ್ದು ಪ್ರಜ್ಞೆ ಬರುವುದು ನಿಧಾನವಾಗಿದೆ. ಇನ್ನೊಂದು ಗಂಟೆಯೊಳಗೆ ಅವರು ಕಣ್ಣು ಬಿಡುತ್ತಾರೆ ಎಂದು ಡಾಕ್ಟರ್ ಹೇಳಿ ದ್ದನ್ನು ಕೇಳಿ, ಅನಂತ್ ನ ತಂದೆ ತಾಯಿಯರಿಗೆ ಸ್ವಲ್ಪ ಸಮಾಧಾನ ಆಯ್ತು.


ವೈದ್ಯರ ಭರವಸೆಯಂತೆ ಒಂದು ಘಂಟೆಯ ನಂತರ ಅನಂತ್ ಮೆಲ್ಲಗೆ ಕಣ್ಣು ಬಿಟ್ಟು ಸುತ್ತ ನೋಡಿದ. ಎಲ್ಲರೂ ಅವನನ್ನು ಮುತ್ತಿಗೆ ಹಾಕಿ 

,"ಅನಂತು ಹೇಗಿದ್ದೀಯಾ?" ಅಂತ ಕೇಳಿದಾಗ, ಅವನು ಎಲ್ಲರನ್ನೂ ಕಕ್ಕಾಬಿಕ್ಕಿಯಾಗಿ ನೋಡುತ್ತಾ "ನಾನು ಯಾರು? ನೀವೆಲ್ಲಾ ಯಾರು? ನಾನು ಯಾಕೆ ಇಲ್ಲಿದ್ದೀನಿ?" ಎನ್ನುತ್ತಾ ಕೇಳಲು ಶುರು ಮಾಡಿದಾಗ, ಮನೆಯವರೆಲ್ಲರಿಗೂ ತುಂಬಾ ಆಶ್ಚರ್ಯ ಹಾಗೂ ಗಾಬರಿಯಾಯಿತು. 

ಕಡೆಗೆ ಅವರೆಲ್ಲರೂ ಡಾಕ್ಟರ ಮುಖ ನೋಡಿದಾಗ

''ಹೆದರಬೇಡಿ,ಹೆಡ್ ಇಂಜುರಿ ಆಗಿರುವುದರಿಂದ ಅವರ ಮೆಮೊರಿ ಲಾಸ್ ಆಗಿದೆ. ಇದು ವಾಪಸ್ ಮಾಮೂಲಿನಂತೆ ಆಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಬೇಕು. ಈಗ ನಿಮ್ಮ ಸಹಕಾರ ನಮಗೆ ಅತ್ಯವಶ್ಯಕ." ಎಂದು ಹೇಳಿದರು.

"ದಯವಿಟ್ಟು ಹೇಗಾದರೂ ಮಾಡಿ ನಮ್ಮ ಅನಂತುನನ್ನು ಮಾಮೂಲಿ ಮನುಷ್ಯನನ್ನಾಗಿ ಮಾಡಿ ಡಾಕ್ಟರ್ " ಎನ್ನುತ್ತಾ  ತಂದೆ ತಾಯಿ ಇಬ್ಬರೂ ಅವರಿಗೆ ಕೈ ಜೋಡಿಸಿದರು.


 




 



Rate this content
Log in

Similar kannada story from Abstract