STORYMIRROR

Shridevi Patil

Classics Inspirational Others

3  

Shridevi Patil

Classics Inspirational Others

2022 ಆಗಲಿ ನೆಮ್ಮದಿಯ ವರ್ಷ

2022 ಆಗಲಿ ನೆಮ್ಮದಿಯ ವರ್ಷ

1 min
140

2022 ತರಲಿದೆ

ಮನಸ್ಸಿಗೆ ನೆಮ್ಮದಿ

ಜೀವನಕ್ಕೆ ಸಮಾಧಾನ

ಮಕ್ಕಳಿಗೆ ಆಟದ ಖುಷಿಯೊಂದಿಗೆ ಶಾಲೆಯ ಪಾಠ,

ಹೀಗೆಂದು ಶಾಲೆಯಲ್ಲಿ ಮೇಷ್ಟ್ರು ಪಾಠ ಮಾಡುತ್ತಿರುವ ಸಮಯದೀ, ಪುಟ್ಟು ಎದ್ದವನೇ ಸರ್ ನನಗೊಂದು ಸಂದೇಹ ಸರ್ ಎಂದನು. 

ಮೇಷ್ಟ್ರು: ಏನಪ್ಪಾ ಸಂದೇಹ?

ಅಲ್ಲಾ ಸರ್, ಈ ಕೊರೊನಾಕ್ಕೆ 2022 ಅಂದ್ರೆ ಹೆದರಿಕೆನಾ? ಆಗ ಕೊರೊನಾ ಹೆದರಿ ಓಡಿ ಹೋಗುತ್ತಾ? 2022 ನೆಮ್ಮದಿ,ಸಮಾಧಾನ ಕೊಡುತ್ತೆ ಅಂತಿದ್ದಿರಲ್ಲಾ ಅದ್ಹೇಗೆ ಅಂತ ಕೇಳಿದೆ ಅಷ್ಟೇ.

ಮೇಷ್ಟ್ರು: ನೋಡಿ ಮಕ್ಕಳಾ, ಯಾವಾಗಲೂ ಧನಾತ್ಮಕವಾವಗಿ ಯೋಚಿಸಬೇಕು, ಒಳ್ಳೆಯದನ್ನೇ ಯೋಚಿಸಬೇಕು. ಸಾಧ್ಯವಾದಷ್ಟು ನಾವು ಧೈರ್ಯದಿಂದ ಇದ್ದು, ಇತರರಿಗೂ ಧೈರ್ಯ ಹೇಳಬೇಕು. ಆಗ ಎಲ್ಲರಿಗೂ ಸ್ವಲ್ಪನಾದ್ರು ಭಯ ಹೋಗುತ್ತೆ. ಹಾಗೆಯೇ 2022 ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ. ಎಲ್ಲರ ಬಾಳಲ್ಲೂ ಸುಖ ಶಾಂತಿ, ನೆಮ್ಮದಿ ನೀಡುತ್ತದೆ. 2022 ಮೊದಲಿದ್ದ ಎಲ್ಲ ರೀತಿಯ ನಮ್ಮ ಖುಷಿಗಳನ್ನು ಮರಳಿಸುತ್ತದೆ ಎಂದು ಹೇಳಿದರು.

ಆಗ ಮಕ್ಕಳೆಲ್ಲರೂ ಖುಷಿಯಾಗಿ 2022ರ ಖುಷಿಗಾಗಿ ಕಾಯುತ್ತೇವೆ ಎಂದು ಹೇಳಿದರು.


Rate this content
Log in

Similar kannada story from Classics