Padmashree Hegde

Romance Thriller

3.7  

Padmashree Hegde

Romance Thriller

1- ಹೆಜ್ಜೆಗೊಂದು ಹೆಜ್ಜೆ

1- ಹೆಜ್ಜೆಗೊಂದು ಹೆಜ್ಜೆ

5 mins
578


ಅದೊಂದು ಬೃಹತ್ತಾದ ಕಟ್ಟಡವನ್ನೊಳಗೊಂಡ ಕಾಲೇಜು. ಸಾವಿರಾರು ವಿದ್ಯಾರ್ಥಿಗಳ ಜೀವಸೆಲೆ. ಮಧ್ಯಮ ವರ್ಗದ ಮತ್ತು ಬಡ ಕುಟುಂಬದ ವಿದ್ಯಾರ್ಥಿಗಳಿಗೆಂದೇ ಅತೀ ಕಡಿಮೆ ಫೀಸ್ ತೆಗೆದುಕೊಂಡು ಅವರಿಗೆ ಅತ್ಯುನ್ನತ ಶಿಕ್ಷಣವನ್ನು ಕೊಡುತ್ತಿದೆ. ಈ ಕಾಲೇಜಿನ ಅಸ್ತಿತ್ವಕ್ಕೆ ಮುಖ್ಯ ಕಾರಣವೇ ಅದು. ಅಲ್ಲಿ ಪಾಠ ಮಾಡುತ್ತಿದ್ದಂತಹ ಅಧ್ಯಾಪಕ ವೃಂದದವರೂ ಕೂಡ ಅಂತಿಂಥವರಲ್ಲ. ಆ ಕಾಲೇಜಿನಲ್ಲಿ ಕೆಲಸವನ್ನ ಗಿಟ್ಟಿಸಿಕೊಳ್ಳುವುದೇ ಎಲ್ಲರಿಗೂ ಹೆಮ್ಮೆಯ ವಿಷಯ.

          ಆ ಕಾಲೇಜಿನ ಹೆಸರು 'ಜ್ಞಾನ ಭಾರತಿ'. ಹೆಸರಿಗೆ ತಕ್ಕಂತೆ ಅದು ಜ್ಞಾನದ ಭಂಡಾರವೇ! ಪಿಯುಸಿಯಿಂದ ಹಿಡಿದು ಪಿಜಿಯ ಎಲ್ಲಾ ಕೋರ್ಸುಗಳೂ ಅಲ್ಲಿ ಲಭ್ಯವಿದೇ. ಆ ನಗರದಲ್ಲೇ ಅತೀ ಪ್ರಸಿದ್ಧಿಯನ್ನು ಪಡೆದುಕೊಂಡಂತಹ ಕಾಲೇಜು ಅದು.

          ಅಂದು ಆ ಕಾಲೇಜಿನಲ್ಲಿ ಜನಸಂಖ್ಯೆ ಸ್ವಲ್ಪ ಕಡಿಮೆಯೇ ಇತ್ತು. ಪಿಯು ಕಾಲೇಜಿನ ಫೈನಲ್ ಎಕ್ಸಾಂಸ್ ಹತ್ತಿರ ಬಂದಿದ್ದರ ಕಾರಣದಿಂದಾಗಿ ಅವರಿಗೆ ಸ್ಟಡಿ ಹಾಲಿಡೇಸ್ ಇತ್ತು. ಹಾಗಾಗಿ ಈಗ ಕಾಲೇಜಿನಲ್ಲಿ ಡಿಗ್ರಿ ಸ್ಟುಡೆಂಟ್ಸ್ ಮಾತ್ರ ಇದ್ದಿದ್ದರು. ಅವಾಗ ಸಮಯ ಸಂಜೆ 4:30. ಕಾಲೇಜು ಬಿಡುವ ಸಮಯವದು. ಎಲ್ಲಾ ಕ್ಲಾಸಿನವರೂ ತಮ್ಮ ತಮ್ಮ ಮನೆಗಳಿಗೆ ಹೊರಟಾಗಿತ್ತು. ತಮ್ಮ ಎಂದಿನ ದಿನಚರಿಯಂತೆ ಅವತ್ತು ಕೂಡ ಸ್ಟಾಫ್ ರೂಮಿನಲ್ಲಿ ಅಧ್ಯಾಪಕರೆಲ್ಲರೂ ಸೇರಿ ಹರಟೆ ಹೊಡೆಯುತ್ತಿದ್ದರು. ಅದು ಅಲ್ಲಿ ಸಾಮಾನ್ಯವಾಗಿ ನಡೆಯುತ್ತಿತ್ತು. ಸಂಜೆ ಕಾಲೇಜು ಬಿಟ್ಟ ಮೇಲೆ ಎಲ್ಲರೂ ಸೇರಿ ಒಂದಷ್ಟು ಹರಟೆ ಹೊಡೆದು ಮನೆಗೆ ತೆರಳುತ್ತಿದ್ದರು. ಇದರಿಂದಾಗಿ ಅಧ್ಯಾಪಕರಲ್ಲಿ ಒಂದು ಒಳ್ಳೆಯ ಬಾಂಧವ್ಯವಿತ್ತು. ಅಲ್ಲಿ ವಯಸ್ಸಿನ ಮಿತಿ ಇರಲಿಲ್ಲ. ಹಿರಿಯ ಅಧ್ಯಾಪಕರೂ ಕೂಡ ತಮ್ಮ ಕಿರಿಯ ಅಧ್ಯಾಪಕರೊಡನೆ ಕುಳಿತುಕೊಳ್ಳುತ್ತಿದ್ದರು. ಬೇರೆ ಬೇರೆ ದೀಪಾರ್ಟ್ಮೆಂಟಿಗೆ ಬೇರೆ ಬೇರೆ ಕೊಠಡಿಗಳಿದ್ದರೂ ಕೂಡ ಸಂಜೆ ಮೇಲೆ ಎಲ್ಲರೂ ಸೇರುತ್ತಿದ್ದದ್ದು ಒಂದೇ ಕಡೆ😊.

        ಆಗ ತಾನೇ ಕ್ಲಾಸ್ ಮುಗಿಸಿ ಬಂದ ರಜನಿ ಸುಸ್ತಾಗಿ ತನ್ನ ಚೇರಿನ ಮೇಲೆ ಕುಳಿತಿದ್ದಳು. ಅವಳನ್ನ ನೋಡಿ ಅಲ್ಲಿಯ ಹಿರಿಯ ಅಧ್ಯಾಪಕರಾದ ಮಂಜುನಾಥ್ ಅವರು ಕಳಕಳಿಯಿಂದ ಕೇಳಿದ್ದರು.

" ಯಾಕೆ ರಜನಿ? ತುಂಬಾ ಸುಸ್ತಾದ ಹಾಗೆ ಕಾಣ್ತಿದಿಯಲ್ಲ. ಏನಾಯ್ತು?"

ರಜನಿ: "ಏನಿಲ್ಲ ಸರ್, ಬೆಳಿಗ್ಗೆಯಿಂದ ಕ್ಲಾಸ್ ತಗೊಂಡು ಸಾಕಾಯ್ತು. ಫುಲ್ ನಿಂತ್ಕೊಂಡಿದ್ದೆ. ಅದಕ್ಕೆ ಸುಸ್ತಾಗಿದೆ. ಮತ್ತೇನಿಲ್ಲ".

        ಇದನ್ನು ಕೇಳಿ ಉಳಿದ ಲೆಕ್ಚರರ್ಸ್ ಗೆ ಆಶ್ಚರ್ಯವಾಗಿತ್ತು. ಸಾಮಾನ್ಯವಾಗಿ ಅವರಿಗೆಲ್ಲ ದಿನಕ್ಕೆ ಇರ್ತೀದಿದ್ದು 4 ಕ್ಲಾಸ್ಗಳು ಮಾತ್ರ. ಅದನ್ನೇ ಇವಳ ಹತ್ರ ಹೇಳಿದ್ದರು. ಆಗ ಅದಕ್ಕೆ ಮಂಜುನಾಥ್ ಅವರೇ ಉತ್ತರಿಸಿದ್ದರು.

"ಮತ್ತೇನಲ್ಲ...ನಮ್ಮ ಮಮತಾ ಮೇಡಂ ಕಾಲೇಜು ಬಿಟ್ರಲ್ವಾ! ಅವರ ಮತ್ತು ರಜನಿ ಸಬ್ಜೆಕ್ಟ್ ಒಂದೇ ಆದರಿಂದ ಅವರ ಸಿಲೆಬಸ್ ಕೂಡ ಇವಳಿಗೆ ಬಂದಿದೆ".

ಅನಿಕೇತ್: "ಅದು ಹೇಗೆ ಇವರಿಗೆ ಬರುತ್ತೆ...ಇನ್ನು ಸುಮಾರು ಲೆಕ್ಚರರ್ಸ್ ಇದಾರಲ್ವಾ? ಇವರೊಬ್ಬರಿಗೆ ಹೇಗೆ?"

ರಜನಿ: "ಹಾ...ಮಮತಾ ಮೇಡಂ ಅವ್ರಿಗೆ ದಿನಕ್ಕೆ 4 ಕ್ಲಾಸ್ಗಳು ಇದ್ದಿದ್ದು. ಅವ್ರು ಹೋದ ಮೇಲೆ ನಾವು ಉಳಿದ ಲೆಕ್ಚರರ್ಸ್ 4 ಜನ. ಅದಕ್ಕೆ ಪ್ರತಿಯೊಬ್ಬರಿಗೆ ಒಂದೊಂದು ಕ್ಲಾಸ್ ಎಕ್ಸ್ಟ್ರಾ ಬಂದಿದೆ. ಇನ್ನು ಇವತ್ತು ಬೇರೆ ಜನ್ಮಿ ರಜೆ ಮೇಲೆ ಇದಾಳಲ್ವಾ...ಅದಕ್ಕೆ ನಂಗೆ ತಗೊಲ್ತಿಯ ಅಂತ ಕೇಳಿದ್ಲು...ನಾನು ಸರಿ ಅಂದೆ...ಸೋ ಇವತ್ತು 6 ಕ್ಲಾಸ್ ಮುಗ್ಸಿ ಬರೋ ಅಷ್ಟರಲ್ಲಿ ಸಾಕಾಯ್ತು...ಉಫ್😥"

       ಅವಳ ಮಾತು ಕೇಳಿ ಅನಿಕೇತ್ ಗೆ ನಗು ಬಂದಿತ್ತು. "ಹೋ ಅಂದ್ರೆ ಇದು ನೀನಾಗೆ ಮಾಡಿಕೊಂಡಿದ್ದು... 5 ಕ್ಲಾಸ್ ಸಾಕಾಗಿಲ್ಲ ಅಂತ ಇನ್ನು ಒಂದ್ ಏಕ್ಸ್ಟ್ರಾ ಕ್ಲಾಸ್ ಬೇರೆ ತಗೊಂಡಯಾ😂😂ಅಷ್ಟು ಇಷ್ಟ ನಿಂಗೆ ಪಾಠ ಮಾಡೋಕೆ ಅಂತ ನಮಗ್ಯಾರಿಗೂ ಗೊತ್ತೇ ಇರ್ಲಿಲ್ವಲೇ😄".

ರಜನಿ: "ನಿಂಗೆ ಯಾವಾಗಲೂ ನನ್ನನ್ನ ಆಡಿಕೊಳ್ಳದೆ ಇದ್ರೆ ತಿಂದಿದ್ದು ಕರಗೊಲ್ಲ ಅಲ್ವಾ ಅನಿ...ಏನಾದ್ರು ಹೇಳ್ಕೊ😏...ನಾನಂತು ಇವತ್ತು ನಿಂಜೊತೆ ಜಗಳ ಆಡೋ ಮೂಡಲ್ಲಿಲ್ಲ... ನನಗೆ ಮನೆಗೆ ಹೋಗಬೇಕು"

ಮಂಜುನಾಥ್: "ನೀನೇನು ಯೋಚ್ನೆ ಮಾಡಬೇಡ ರಜನಿ ನಮ್ ಕಾಲೇಜಿಗೆ ಹೊಸ ಲೆಕ್ಚರರ್ ಅಪಾಯಿಂಟ್ ಆಗಿದೆಯಂತೆ... ಇವತ್ತು ಗುರುವಾರ ಅಲ್ವಾ? ಬರೋ ಸೋಮವಾರನೇ ಅವ್ರು ಇಲ್ಲಿಗೆ ಬರ್ತಾ ಇದಾರೆ"

ರಜನಿ: "ನಿಜಾನ ಸರ್!!! ಅಬ್ಬಾ ನಂಗೆ ಈಗ ಸಮಾಧಾನ ಆಯ್ತು...ಈ ಜನ್ಮಿ ಬೇರೆ ನಾಳೇನು ಬರೋಲ್ಲ ಅಂತಿದ್ಲು...ಮೊದ್ಲು ನಾನು ಎಕ್ಸೈಟ್ಮೆಂಟ್ ಅಲ್ಲಿ ಅವಳ ಕ್ಲಾಸ್ ತಗೊಳ್ತಿನಿ ಅಂತ ಅಂದಿದ್ದೆ...ಆದ್ರೆ ಇವತ್ತು ಒಂದಿನಕ್ಕೆ ಸಾಕಾಗಿ ಹೋಯ್ತು...ಹೇಗೂ ನೆಕ್ಸ್ಟ್ ವೀಕ್ ಇಂದ ಬರ್ತಾರಲ್ವಾ? ಅವರೇ ತಗೊಳ್ತಾರೆ...ನಾಳೆ ನಾನು ನನ್ ಕ್ಲಾಸ್ ಅಷ್ಟೇ ತಗೊಳ್ತಿನಿ.

         ಹೌದು ಇಲ್ಲಿ ಎಲ್ರು ಇದೀವಿ...ಆದ್ರೆ ನಮ್ ಸೈಲೆಂಟ್ ಮೇಡಂ ಮಾತ್ರ ಇಲ್ವಲ್ಲಾ...ಯಾಕೆ ಇನ್ನು ಅವಳ ಕ್ಲಾಸ್ ಮುಗಿದಿಲ್ವಾ? ನಂಗೆ ಮನೆಗೆ ಬೇರೆ ಹೋಗೋಕೆ ಟೈಮ್ ಆಯ್ತು"

ಜಗದೀಶ್: "ಇಲ್ಲಾ...ಅವ್ಳು ಇನ್ನು ಬಂದಿಲ್ಲ...ಮೇ ಬಿ ಲೇಟಾಗಬಹುದು... ನಿಂಗೊತ್ತಲ್ವಾ ಅವಳ ಬಗ್ಗೆ...ಒಂದ್ಸಲ ಅವ್ಳು ಕ್ಲಾಸಿಗೆ ಹೋದ್ರೆ ಅಷ್ಟು ಬೇಗ ಹೊರಗೆ ಬರೋದೆ ಇಲ್ಲ...ಮಕ್ಕಳು ಕೂಡ ಹಾಗೆ ಆಡ್ತಾರೆ...ನಮಗೆಲ್ಲಾ ಟೈಮ್ ಆಯ್ತು ಅಂದ್ರೆ ಸಾಕು ಅವರೇ ನೆನಪು ಮಾಡಿ ಕ್ಲಾಸ್ಸಿಂದ ಹೊರಗೆ ಕಳಿಸ್ತಾರೆ... ಆದ್ರೆ ಅವ್ಳಿಗೆ ಮಾತ್ರ ಅದೆಷ್ಟು ಹೊತ್ತಾದ್ರೂ ಇಂಟರೆಸ್ಟ್ ಇಂದ ಕೂತು ಪಾಠ ಕೇಳ್ತಾರೆ...ಅದೇನು ಇಷ್ಟಾನೋ ಅವ್ಳನ ಕಂಡ್ರೆ ಅವರಿಗೆಲ್ಲ"

ಮಂಜುನಾಥ್: "ಬಹುಶಃ ಆ ಹುಡುಗಿ ಹೆಚ್ಚು ಮಾತಾಡೋದೆ ಆ ಮಕ್ಕಳ ಹತ್ರ ಅನ್ಸುತ್ತೆ...ಅದನ್ನ ಬಿಟ್ರೆ ನಾನು ಅವಳನ್ನ ಯಾರತ್ರನು ಅಷ್ಟು ಮಾತಾಡೋದೆ ನೋಡಿಲ್ಲ😔 ಅವರ ಜೊತೆ ಇದ್ದಾಗ ಮಾತ್ರ ಅದೆಷ್ಟು ಖುಷಿಯಾಗಿ ಇರ್ತಾಳೆ ಅವಳು".

ಅನಿಕೇತ್: "ನೀವ್ ಹೇಳೋದು ನಿಜ ಸರ್...ನಮಗಂತೂ ಅವರ ಮನೆ ಎಲ್ಲಿದೆ ಅಂತಾನೂ ಗೊತ್ತಿಲ್ಲ...ಅವ್ರು ಯಾವತ್ತೂ ಅವರ ಮನೆಯವರ ಬಗ್ಗೆ ಮಾತಾಡೋದೆ ಇಲ್ಲ...ಮನೆಯವರ ಬಗ್ಗೆ ಹೋಗ್ಲಿ...ಇದುವರೆಗೂ ಅವ್ರು ಕಾಲೇಜಿಗೆ ಸಂಬಂಧ ಪಟ್ಟಿದ್ದ ವಿಷ್ಯ ಬಿಟ್ಟು ಬೇರೇನೂ ಮಾತಾಡಿದ್ದು ನಾವು ಯಾರು ನೋಡೇ ಇಲ್ಲ"

ರಜನಿ: "ನಿಮಗೆಲ್ಲ ಹೇಗೂ ಆಯ್ತು...ಅವ್ಳು ನನ್ನ ಕ್ಲೋಸ್ ಫ್ರೆಂಡ್!! ನಂಗೂ ಇದುವರೆಗೂ ಅವಳ ಬಗ್ಗೆ ಏನೂ ಗೊತ್ತಿಲ್ಲ...ಪ್ರತಿದಿನ ಸ್ಕೂಟಿಲಿ ಒಬ್ಬಳೇ ಬರ್ತಾಳೆ...ಹೋಗ್ತಾ ಮಾತ್ರ ನಾನು ಕೇಳ್ಕೊಂಡಿದ್ದಕ್ಕೆ ನನ್ನ ಕರ್ಕೊಂಡು ನಮ್ಮನೆ ಕ್ರಾಸ್ ತನಕ ಬಿಟ್ಟು ಹೋಗ್ತಾಳೆ...ಆಮೇಲೆ ಅದೆಲ್ಲಿ ಮಾಯ ಆಗ್ತಾಳೆ ಯಾರಿಗೂ ಗೊತ್ತಿಲ್ಲ...ಕೆಲವೊಂದು ಸಲ ನಂಗೆ ಅನಿಸಿದ್ದಿದೆ...ಅವಳನ್ನ ಯಾಕೆ ಫಾಲೋ ಮಾಡ್ಕೊಂಡು ಹೋಗಿ ಅವಳ ಮನೆನ ಕಂಡುಹಿಡಿಬಾರ್ದು ಅಂತ?!! ಆದ್ರೆ ಆಮೇಲೆ ಅನ್ಸುತ್ತೆ...ಅದೇನಾದ್ರು ಮುಂದೆ ಅವ್ಳಿಗೆ ಗೊತ್ತಾಗಿ ನನ್ನ ಜೊತೆ ಈಗ ಮಾತಾಡೋ ಅಷ್ಟು ಮಾತಾಡದೇ ಇದ್ರೆ ಅಂತ ಸುಮ್ನಾಗ್ತಿನಿ...ಅದೆಷ್ಟು ಸೈಲೆಂಟ್ ಅವ್ಳು...ಯಾರ್ ಜೊತೇನು ಮಾತಾಡಲ್ಲ... ಅಬ್ಬಾ ನನ್ನ ಕೈ ಅಲ್ಲಿ ಒಂದು ನಿಮಿಷನು ಮಾತಾಡದೇ ಇರಕ್ಕೆ ಆಗೋಲ್ಲ...ಅದ್ಹೇಗೆ ಇರ್ತಾಲೊ ಅವ್ಳು ನನಗಂತೂ ಗೊತ್ತಾಗೋಲ್ಲ".

       ಅದೇ ವೇಳೆಗೆ ಅಲ್ಲಿಗೆ ಕಾಮರ್ಸ್ ಡಿಪಾರ್ಟ್ಮೆಂಟಿನ ಲೆಕ್ಚರರ್ ಸಂಜಯ್ ಬಂದಿದ್ದ.

" ಏನೂ ಯಾರ ಬಗ್ಗೆ ಮಾತಾಡ್ತಿದೀರಿ ಎಲ್ರು...ಏನು ವಿಷ್ಯ?"

ಅನಿಕೇತ್: "ಎನಿಲ್ವೋ.. ಅದೇ ನಮ್ ಸೈಲೆಂಟ್ ಮೇಡಂ...ನಿನ್ ಹುಡುಗಿ ಮಹಿಮಾ ಬಗ್ಗೆ ಮಾತಾಡ್ತಾ ಇದ್ವಿ...ಒಂಥರಾ ಮಿಸ್ಟರ್ರಿ ಗರ್ಲ್ ಅವ್ಳು ಅಲ್ವಾ"

        ಮಹಿಮಾ ಹೆಸರು ಕೇಳಿ ಸಂಜಯ್ ಮುಖ ಗಂಭೀರವಾಯಿತು.

" ನೋಡು ಅನಿ ಈ ರೀತಿ ಎಲ್ಲ ಹೇಳಬೇಡ... ಅವ್ಳು ನನ್ ಹುಡುಗಿ ಅಲ್ಲ...ಹಾ ನಂಗೆ ಅವ್ಳು ಇಷ್ಟನೆ...ಈ ವಿಷಯ ಎಲ್ರಿಗೂ ಗೊತ್ತಿರೋದೇ...ಆದ್ರೆ ನಾನು ಇದನ್ನ ಅವಳ ಹತ್ರ ಯಾವತ್ತೂ ಹೇಳಲೇ ಇಲ್ಲ...ಹೇಳೋಕೆ ಧೈರ್ಯನೇ ಬರೋಲ್ಲ ಕಣೋ😓ಅವಳಿಗೆ ನನ್ನ ಮನಸ್ಸಿನ ಮಾತು ಹೇಳೋದು ಹೋಗ್ಲಿ, ಅವಳ ಹತ್ರ ಇದುವರೆಗೂ ಕ್ಯಾಜುವಲ್ ಆಗಿ ಮಾತಾಡೋಕ್ಕೆ ಕೂಡ ಸಾಧ್ಯ ಆಗಿಲ್ಲ...ನೀನು ಹೇಳಿದಂಗೆ ಅವಳೊಂಥರಾ ಮಿಸ್ಟರಿ ಗರ್ಲೆ"

ರಜನಿ: "ಬರೀ ಮಿಸ್ಟರಿ ಗರ್ಲ್ ಅಷ್ಟೇ ಅಲ್ಲ ಬ್ಯುಟಿಫುಲ್ ಅಂಡ್ ಇಂಟೆಲ್ಲಿಜೆಂಟ್ ಗರ್ಲ್ ಕೂಡ ಹೌದು...ಈಗ ನೋಡು ಟೈಮ್ ಎಷ್ಟು ಅಂತ 5 ಗಂಟೆ ಆಗ್ತಾ ಬಂತು...ಆದ್ರೂ ಅವಳ ಕ್ಲಾಸಿಂದಾ ಒಂದೇ ಒಂದು ಸೌಂಡು ಕೂಡ ಬರಲ್ಲ...ಮಹಿಮಾ ಮ್ಯಾಮ್ ಕ್ಲಾಸ್ ಅಂದ್ರೆ ಮಕ್ಕಳು ಮನೆಗೆ ಹೋಗೋದನ್ನು ಮರೆತು ಪಾಠ ಕೇಳ್ತಾ ಕೂತುಬಿಡ್ತಾರೆ🤣

         ಇನ್ನು ಅವಳು ಅದೆಷ್ಟು ಚಂದ😍😍ಹುಡುಗರಂತೂ ಹೇಗೂ ಬೀಳ್ತಾರೆ ಅವಳ ಅಂದಕ್ಕೆ...ಆದ್ರೆ ಹುಡುಗಿಯರಲ್ಲಿ ಕೂಡ ಅವಳನ್ನ ಒಂದು ಸಲ ನೋಡಿ ಮತ್ತೊಂದ್ಸಲ ತಿರಿಗಿ ನೋಡ್ತಾ ಹೋಗ್ತಾರೆ ಅಂದ್ರೆ !!!ನಾನ್ಯಾಕಾದ್ರು ಹುಡುಗಿ ಆಗಿ ಹುಟ್ಟಿದ್ನೂ ಅಂತ ಬೇಜಾರಾಗ್ತಿದೆ"

ಅನಿಕೇತ್: "ಏಯ್ಯ್ ಇದೇನೇ ಹೀಗೆ ಹೇಳ್ತ ಇದೀಯ... ನೀನು ಹುಡುಗ ಆಗಿದಿದ್ರೆ ನಾನು ಏನು ಮಾಡಬೇಕಾಗಿತ್ತು...ನಂ ಕಥೆ ಏನು ಅವಾಗ...ಅದ್ರೂ ಬಗ್ಗೆನೂ ಸ್ವಲ್ಪ ಯೋಚ್ನೆ ಮಾಡೇ ಬಂಗಾರಿ😋"

ಅನಿಕೇತ್ ಮಾತು ಕೇಳಿ ಅಲ್ಲಿದ್ದವರೆಲ್ಲ ಗೊಳ್ಳೆಂದು ನಕ್ಕರೆ ರಜನಿ ತನ್ನ ಮುಖ ತಿರುಗಿಸಿಕೊಂಡಳು. ಅನಿಕೇತ್ ಮತ್ತು ರಜನಿಯ ಲವ್ ಸ್ಟೋರಿ ಅಲ್ಲಿದ್ದವರಿಗೆಲ್ಲಾ ಗೊತ್ತಿತ್ತು. ಅವರಿಬ್ಬರು 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದು ಎರಡು ಮನೆಯವರಿಗೂ ಗೊತ್ತಿತ್ತು. ಸದ್ಯದಲ್ಲಿ ಮದುವೆಯೂ ಗೊತ್ತಾಗುವುದರಲ್ಲಿತ್ತು.

ಸಂಜಯ್: "ನೀನು ಹೇಳಿದ್ದು ನಿಜಾ ರಜನಿ...ಮಹಿಮಾ ನೋಡಲು ತುಂಬಾ ಮುದ್ದಾಗಿದ್ದಾಳೆ😍ಎಲ್ಲರ ಥರ ಅವಳು ಕೆಜಿಗಟ್ಟಲೇ ಮೇಕಪ್ ಮಾಡೋಲ್ಲ...ಸಿಂಪಲ್ ಆಗಿ ಇರುತ್ತಾಳೆ...ಆದರೆ ಅವಳಿಗೆ ಒಳ್ಳೆ ಡ್ರೆಸ್ಸಿಂಗ್ ಸೆನ್ಸ್ ಇದೆ...ಸಿಂಪಲ್ ಆಗಿ ಒಂದು ಕಾಟನ್ ಸೀರೆ ಉಟ್ಟು, ತನ್ನ ಕೂದಲಿಗೆ ಒಂದು ಕ್ಲಿಪ್ ಹಾಕಿ, ಹಣೆಗೆ ಒಂದು ಬೊಟ್ಟನ್ನು ಇಟ್ಟು, ಕಿವಿಗೆ ಒಂದು ಪುಟ್ಟ ಹ್ಯಾಂಗಿಂಗ್ ಸಿಕ್ಕಿಸಿಕೊಂಡರೆ ಮುಗಿತು ಅವಳ ಅಲಂಕಾರ...ಇನ್ನು ಕೈಗೆ ಒಂದು ವಾಚ್ ಕಟ್ಟುತ್ತಾಳೆ ಅಷ್ಟೇ...ಆದ್ರೂ ಅದೆಷ್ಟು ಚಂದ ಕಾಂತಾಳೆ ಅವಳು".

        ಸಂಜಯ್ ಅಂತೂ ಅವಳನ್ನ ಹೊಗಳ್ತಾ ಹೊಗಳ್ತಾ ಕನಸಿನ ಲೋಕದಲ್ಲಿ ತೇಲಿ ಹೋಗಿದ್ದ. ಆಗ ರಜನಿಯ ದೊಡ್ಡ ಸ್ವರವೇ ಅವನನ್ನು ವಾಪಾಸ್ ತರಬೇಕಾಯ್ತು😄😃.

ರಜನಿ: "ಹ್ಮ್...ಹೌದು...ತೆಲುಗು ಹೀರೋಯಿನ್ ಕೀರ್ತಿ ಸುರೇಶ್ ಥರ ಕಾಂತಾಳೆ...ಡಿಟ್ಟೋ ಸೇಮ್ ಹಾಗೆ😋ಹ ಹ ಹ"

ಅನಿಕೇತ್: "ಆದ್ರೆ ನಂದ್ ಒಂದು ಡೌಟ್...ಅವ್ಳು ಯಾವಾಗ್ಲೂ ಅದೇ ಗೆಟಪ್ ಅಲ್ಲೇ ಇರ್ತಾಳೆ ಯಾಕೆ...ಐ ಮೀನ್ ಯಾವಾಗ್ಲೂ ಅಷ್ಟು ಸಿಂಪಲ್ ಅಗೆ ಇರ್ತಾಳೆ...ಒಂದು ದಿನನೂ ನಾವು ಯಾರು ಅವಳನ್ನ ಕೈ ಗೆ ಬಳೆ ಹಾಕಿ, ಕುತ್ತಿಗೆಗೆ ಸರ ಹಾಕಿ, ಹೂವು ಮುಡಿದಿದ್ದನ್ನ ನೋಡಿದಿವ...ಇಲ್ಲ ತಾನೇ?!!"

ರಜನಿ: "ಏಯ್ ಮಂಗ...ಸುಮ್ನಿರು ಏನೇನೋ ಹೇಳಬೇಡ...ಒಂದೊಂದು ಹುಡುಗಿಯರು ಹಾಗೆ ಇರ್ತಾರೆ...ಅವರಿಗೆ ಸಿಂಪಲ್ ಆಗಿರೋದೆ ಇಷ್ಟ ಆಗಿರುತ್ತೆ...ಹೂವು ಮುಡಿಯೋದು ಕೂಡ ಇಷ್ಟ ಇರಲ್ಲ ಗೊತ್ತಾ...ಏನೇನೋ ಕಲ್ಪನೆ ಮಾಡ್ಕೊಂಡು ನಿನ್ ತಲೆನ ಹಾಳು ಮಾಡ್ಕೊಳೋದಲ್ದೆ ನಮ್ ತಲೇನೂ ಹಾಳು ಮಾಡಬೇಡ"

       ಅಷ್ಟರಲ್ಲಿ ಮಹಿಮಾ ಅಲ್ಲಿಗೆ ಬಂದಿದ್ದರಿಂದ ಅವರ ಮಾತುಕತೆ ಅಲ್ಲಿಗೆ ನಿಂತಿದ್ದರೆ, ಅನಿ ತಲೆಯಲ್ಲಿ ಮಾತ್ರ ಅದೊಂದು ಅನುಮಾನ ಹಾಗೆ ಇತ್ತು.

       ಮಹಿಮಾ ಬಂದವಳು ಎಲ್ಲೆರೆಡೆಗೆ ಒಂದು ನೋಟ ಬೇರೆ ಸ್ಮೈಲ್ ಕೊಟ್ಟು ತನ್ನ ಬ್ಯಾಗನ್ನ ತೆಗೆದುಕೊಂಡು ಹೊರಟಿದ್ದಳು. ಅವಳ ಜೊತೆಗೆ ಅವಳ ಬಾಲದಂತೆ ರಜನಿಯೂ ಕೂಡ ಅನಿಗೆ ಬೈ ಹೇಳಿ ಓಡಿದ್ದಳು.Rate this content
Log in

Similar kannada story from Romance