STORYMIRROR

ಹೃದಯ ಸ್ಪರ್ಶಿ

Inspirational

2  

ಹೃದಯ ಸ್ಪರ್ಶಿ

Inspirational

ಯೋಧರು

ಯೋಧರು

1 min
145

ಮೇರಾ ಭಾರತ್ ಮಹಾನ್…

ವೀರ ಯೋಧರಿಗಿದೋ ನನ್ನ ಹೃದಯಾಂತರಾಳದ ಸಲಾಂ.


ತಮ್ಮ ಪ್ರಾಣದ ಹಂಗುತೊರೆದು

ಕಾರ್ಗಿಲ್ ಜಯಭೇರಿ ಬಾರಿಸಿದ

ಭಾರತದ ಹೆಮ್ಮೆಯ ಪುತ್ರರು... 

ಕಲಿಗಳಲ್ಲಾ ಇವರು ಹುಲಿಗಳು.


ಶತ್ರುವಿನ ದಾಳಿಯಿಂದ ರಕ್ಷಿಸಲು

ಸೆಣಸಾಡಿದ ಸಿಂಹದ ಒಕ್ಕಲು …

ನರನಾಡಿಯಲ್ಲೂ ದೇಶಪ್ರೇಮವೆಂಬ

ದೇಶ ಭಕ್ತಿ ಉಕ್ಕಲು…


ದೇಶದ ಗಡಿಯಲ್ಲಿ ದ್ವೇಷದ ಕಿಡಿಯಲ್ಲಿ

ಶತ್ರುಗಳ ಧಾಳಿ ನಾನಾ ವಿಧದಲ್ಲಿ

ಕುದಿವ ರಕ್ತದಲ್ಲಿ ಹೋರಾಡುವ ಯುದ್ಧದಲ್ಲಿ

ಮಡಿವ ದೇಶ ಪ್ರೇಮದಲ್ಲಿ


ಸಂಬಂಧ ದೂರದಲ್ಲಿ ನಿರ್ಬಂಧ ಜಾಗದಲ್ಲಿ

ಸದಾ ಸಿದ್ಧ ಭಾರತದ ರಕ್ಷಣೆಯಲ್ಲಿ

ನಿರತ ವೈರಿಪಡೆ ಸದೆ ಬಡೆಯುವಲ್ಲಿ


ನಾಡ ಕಾಯೋ ಧೀರರು …

ನುಸುಳಿಬರುವವರ ಸದೆಬಡೆಯುತ …

ತಮ್ಮ ಪ್ರಾಣವನ್ನೇ ದೇಶಕ್ಕಾಗಿ 

ಪಣವಿಟ್ಟ ಧೀಮಂತರು …


ಸಾವಿಗೆ ಎದೆಯೊಡ್ಡಿ ವೈರಿಯ ಎದೆ ಸೀಳಿ

ಸುಪ್ರಸಿದ್ಧ ಎದೆಗಾರಿಕೆಯಲ್ಲಿ

ತೋರದೆ ಗೌರವ ಸ್ಮರಿಸದೆ ಜೀವವ

ಬಲಿಕೊಟ್ಟರು ದೇಶದ ಉಳಿವಿಗಾಗಿ...


ಭಾರತಕ್ಕಾಗೇ ಜನಿಸಿ..

ಜನನಿ ಭೂಮಿಯ ಭದ್ರತೆಗಾಗೇ ಜೀವಿಸಿ... 

ಭಯವಿಲ್ಲದೆ ನಮಗಾಗೇ ತಮ್ಮ ಪ್ರಾಣ ತ್ಯಾಗ ಮಾಡುವ ಯೋಧರ ಮುಂದೆ ನಾವು ನೀವೆಲ್ಲಿ...? 


ಜೈ ಜವಾನ್


Rate this content
Log in

Similar kannada poem from Inspirational