ವಿನಿಮಯ
ವಿನಿಮಯ
ಆಕಸ್ಮಿಕ ನಮ್ಮಿಬ್ಬರ ಭೇಟಿಯು
ನೋಡಿದ ತಕ್ಷಣ ಸೆಳೆಯಿತು ಮನವು
ಕಲೆತು ಕಣ್ಣುಗಳ ಪರಿಭಾಷೆಯು
ನೆನಪಿಸಿ ಜನುಮದ ಅನುಬಂಧವು
ಕಣ್ನೋಟದಲಿ ಪ್ರೀತಿಯ ವಿನಿಮಯವು
ಮುಂಗುರುಳು ಸರಿಸಿ ಕುಡಿನೋಟದಿ
ಮೋಹಕ ನಗುವಿನ ಮಾಧುರ್ಯವು
ಮಾರ್ಧನಿಸಿ ಕಿವಿಗಿಂಪು ಮೃದು ಅಧರದಿ
ನನ್ನೊಳ ಭಾವದಿ ಮೂಡುವ ಪದಗಳೆಲ್ಲವು ಸ್ತಬ್ಧವು
ಜೇನಂಥ ಸವಿಯಾದ ನಿನ್ನುಡಿಯ ಕೇಳುತಿರೆ
ಹೃದಯದಿ ಪಲ್ಲವಿಸಿದ ಈ ಪ್ರೇಮ ಅಮರವು
ಆಂತರ್ಯದಿ ಚಿಗುರಿದ ಈ ಒಲವು ಶಾಶ್ವತವಾಗಿರೆ
✍️ರಮ್ಯಕೃಷ್ಣಪ್ರಭು
ಮೂಡಬಿದಿರೆ

