ಕಾಲ ಚಕ್ರ
ಕಾಲ ಚಕ್ರ
ಕಾಲಚಕ್ರವು ನಿಲ್ಲದೆ ಉರುಳುತಿದೆ
ತಿಳಿಯದೆ ಸಮಯವು ಸರಿಯುತ್ತಿದೆ
ಹೀಯಾಳಿಸಿ ನಕ್ಕವರೆಲ್ಲಾ ಎಲ್ಲಿ? ಹೋದರು
ಸದ್ದಿಲ್ಲದೆ ಕಾಲಗರ್ಭದಲಿ ಮರೆಯಾದರು
ಮೌನದಿಂದ ಎಲ್ಲವನು ಎಲ್ಲರನ್ನೂ ಗೆದ್ದವರು
ಕ್ಷಣದ ಆವೇಶದಿಂದ ಎಲ್ಲವನ್ನು ಕಳೆದುಕೊಂಡವರು
ಪ್ರತಿಕ್ಷಣವೂ ಜೀವನ ಕಲಿಸುವ ಪಾಠವ ಅರಿಯದೆ
ಕಣ್ಣಿದ್ದು ಕುರುಡಾಗಿ ತಮ್ಮಲ್ಲಿದ್ದ ನೆಮ್ಮದಿ ಅರಿಸಿದರು ತಿಳಿಯದೆ
ಸಮಯ ಬಂದಾಗ ಧರಿಸಿದ ಮುಖವಾಡ ಕಳಚುದಂತೆ
ನಿಜಬಣ್ಣ ಬಯಲಾಗಿ ನಾಟಕದ ಜೀವನ ಮುಗಿಯುದಂತೆ
ಎಲ್ಲವನ್ನು ಬಲ್ಲವನು ಅವನೇ ಜಗದೊಡೆಯ ಸೂತ್ರಧಾರ
ಸಮಯಗೊಂಬೆಗಳು ನಾವು ಅವನ ಕೈಯಲ್ಲಿದ್ದೆ ಪಾಪಪುಣ್ಯದ ಲೆಕ್ಕಚಾರ
ಒಮ್ಮೊಮ್ಮೆ ಜೀವನದಲಿ ಕಹಿಯ ಅನುಭವದ ಸವಿಯು
ಮತ್ತೊಮ್ಮೆ ರಸಪಾಕ ಹೋಳಿಗೆಯ ಹೂರಣದ ಸಿಹಿಯು
ಕಾಲ ಸರಿದಂತೆ ಕಹಿ ಸಿಹಿಯಾಗಿ ಸಿಹಿ ಕಹಿಯಾಗಿ ಮಿಶ್ರಣವು
ಸಮಯ ತಿಳಿಸುವುದು ಯಾರು ನಮ್ಮರೆಂದು ಜೀವನದಲಿ ಮೂಡಿ ಅರಿವು
✍️ರಮ್ಯಕೃಷ್ಣಪ್ರಭು
ಮೂಡಬಿದಿರೆ
