ಮನಗಳ ಮಿಲನ
ಮನಗಳ ಮಿಲನ
ಮನದ ನವಿರಾದ ವೀಣೆಯ
ತಂತಿಯ ಕೈಗಳಲಿ ಮೀಟೆಯ
ಸುಮಧುರ ಸಪ್ತ ಸ್ವರದಿ
ಪಾಡುತ ಗಾನವ ಮುದದಿ||
ಕನವರಿಕೆಯಲು ಮಾಧವನ ಧ್ಯಾನ
ನೆನೆಯುತ ನೀಲಮೇಘಶ್ಯಾಮನ
ತಲ್ಲೀನವಾದಳು ಕೇಳುತ ಮುರಳಿ ಕೊಳಲಗಾನ
ನವಿಲಗರಿಯ ಹಿಡಿದು ಮೈಮರೆತಳು ಮೀರಾಮೋಹನ||
ಮನದ ಗೋಡೆಯ ಮೇಲೆ ಮಾಧವನ ರೂಪವು
ಮೂಡಿ ತಂದಿದೆ ಮನಕೆ ಹರುಷವು
ಹಪಹಪಿಸಿದೆ ಶ್ಯಾಮ ಸುಂದರನ ನೋಡಲು ತನವು
ಪ್ರೇಮದಿ ಬೆರೆಯುತ ಮನಗಳ ಮಿಲನವು||
✍️ರಮ್ಯಕೃಷ್ಣಪ್ರಭು
ಮೂಡಬಿದರೆ

