ಉಸಿರು.
ಉಸಿರು.
ಶಕ್ತಿಯೇ ದೇಹದ ಉಸಿರು
ಯುಕ್ತಿಯು ಬುದ್ದಿಯ ಉಸಿರು.
ದೇವರೆ ಅನಾಥನ ಉಸಿರು.
ಸಾಧನೆಯೇ ಯಶಸ್ಸಿನ ಉಸಿರು.
ಪ್ರೀತಿಯೇ ದಾಂಪತ್ಯದ ಉಸಿರು.
ನಂಬಿಕೆಯೇ ಒಗ್ಗಟ್ಟಿನ ಉಸಿರು.
ಜ್ಞಾನವೇ ಗುರುವಿನ ಉಸಿರು
ಆಸೆಯೇ ಮಕ್ಕಳ ಉಸಿರು.
ಕಾಯಕವೇ ಸಂಪತ್ತಿನ ಉಸಿರು
ಹಸಿರೇ ದೇಶದ ಉಸಿರು.
ಹೆಸರೇ ಉತ್ಪನ್ನದ ಉಸಿರು.
ನೀತಿ,ನಿಯತ್ತೇ ನಿರ್ಭೀತಿಯ ಉಸಿರು.
