STORYMIRROR

Sulochana C.M.

Abstract Classics Inspirational

4  

Sulochana C.M.

Abstract Classics Inspirational

ಕಾವ್ಯ ದಿನ.

ಕಾವ್ಯ ದಿನ.

1 min
6

ಕವನ ಜನನವಾಗುವುದು ಏಕಾಂತದಲ್ಲಿ.

ನೋವು ನಲಿವನು ಅಕ್ಷರದಲ್ಲಿ ಚೆಲ್ಲಿ.

ರಾಮಾಯಣ ರಚಿಸಿದ ಮಹರ್ಷಿವಾಲ್ಮೀಕಿ.

ಮಹಾಭಾರತ ಬರೆದರು ವ್ಯಾಸ ಮಹರ್ಷಿ.

  ವಚನದಲಿವಿರಹ ವೇದನೆ ಹೊರಚೆಲ್ಲಿದ ಅಕ್ಕ ನಮ್ಮೀ

ಕನ್ನಡದ ಮೊದಲ ಕವಯಿತ್ರಿ.

ಆಂಡಾಳ್, ಮೀರಾ, ರಚಿಸಿದರು ಪಾಶುರ, ಭಜನೆಗಳನ್ನು.

ಈ ವೀರ ವಿರಹಿಣಿಯರು ದೇವ ಮಾರ್ಗದಲ್ಲಿ 

ಅಜರಾಮರರಾಗಿಹರು ತಮ್ಮ ಭಕ್ತಿ ರಸದಲ್ಲಿ

 ಶಾಕುಂತಲೆ ಮೈಮರೆತಳು ದುಷ್ಯಂತನಲ್ಲಿ.

ದೂರ್ವಾಸ ಋಷಿ ಶಪಿಸಿಬಿಟ್ಟರು ಕಡುಕೋಪದಲ್ಲಿ.

ವಿರಹಿಣಿಯ ಪಾಡ ಸೆರೆಹಿಡಿದಿಹನು ಕಾಳಿದಾಸ ತನ್ನ ಮೇಘದೂತದಲ್ಲಿ.

ಪ್ರೇಮ ಕಾವ್ಯದ ಕವಿ ಕಾಳಿದಾಸ ತಾ ಮಹಾಕವಿ ಬಿರುದಾಂಕಿತನು.

ರಾಮಾಯಣ ದರ್ಶನಂ ರಚಿಸಿ ಕನ್ನಡದ ರಸಋಷಿಯೆನಿಸಿದರು ಕುವೆಂಪು.

ರನ್ನ ಜನ್ನ ಪೊನ್ನ ಮಹಾ ಕವಿ ಕುಲದ ನೆಲವಿದು ಕನ್ನಡದ ಸೊಗಡು.

ನೋವು ನಲಿವು, ಒಲವು, ನವರಸಗಳ, ಸರಸ ವಿರಸ ಸ್ಫುರಿಸಿ ಹೋಗಿಹರಿಲ್ಲಿ.

ಆಯ್ದು ಅರಿತು ಅನುಸರಿಸಬೇಕಿದೆ ನಮ್ಮ ಬದುಕಿನಲ್ಲಿ.


Rate this content
Log in

Similar kannada poem from Abstract