STORYMIRROR

Sulochana C.M.

Classics Inspirational Others

4  

Sulochana C.M.

Classics Inspirational Others

ಪರೀಕ್ಷೆ.

ಪರೀಕ್ಷೆ.

1 min
8

ಪರೀಕ್ಷೆಗೆ ಭಯವೇತಕೆ ಮಗೂ

ಜೊತೆಗೆ ನಾವಿರುವಾಗಾ.

ನಾ ಹೇಳಿದ್ದನ್ನು ಕೇಳು ಇರಿಸಿ ನಿಗಾ

ಆಮೇಲೆಲ್ಲಾ ಆಟ ಊಟ ಓಡಾಟ ನಿನಗೆ.


ನಾನು ಕನ್ನಡ,ಇಂಗ್ಲೀಷು,ಹಿಂದಿ ಭಾಷೆ ಹೇಳಿಕೊಡುವೆ.

ಸಮಾಜವಿಜ್ಞಾನವನಂತೂ 

ಆಟವಾಡುತ್ತಾ ಕಲಿಸಿಕೊಡುವೆ.

ಕೂಡುವ ಕಳೆಯುವ ,ಗಣಿತ,ವಿಜ್ಞಾನ ದಲ್ಲಿ

ಅಪ್ಪ ನಂತೂ ಪಕ್ಕಾ..ಮಗ್ಗಿಯನ್ನೂ ಸುಲಭ ಮಾಡುವರಪ್ಪಾ.


ಮಾರ್ಚಿ ಬಂತೆಂದರೆ ಮಕ್ಕಳಿಗೆಲ್ಲಾ ಪರೀಕ್ಷೆಯ ಚಿಂತೆ..

ಇದೇನು ನಿನ್ನೊಬ್ಬನ ಸಮಸ್ಯೆ ಮಾತ್ರವಲ್ಲಾ .

ಇಷ್ಟುದಿನ ಕಲಿತಿದ್ದರ ಪುನರಾವರ್ತನೆ ಅಷ್ಟೇ

ಪ್ರಶ್ನ ಪತ್ರಿಕೆಯಲ್ಲಿ ಪಾಠಕ್ರಮದ ವಿಷಯಗಳೇ  ಇರುತ್ತವೆ.


ನಗು ನಗುತ್ತಾ ಬಾ ನನ್ನ ಪಕ್ಕ ಕುಳಿತುಕೋ.

ತಗೋ ಒಂದು ಪೆಪ್ಪರ್ಮಿಂಟ್ ಬೇಕಾದರೆ ಇಟ್ಟುಕೋ.

ಒಂದೊಂದೇ ಪಾಠ ಮುಗಿಸುತ್ತಾ, ವಿದಾಯ ಹೇಳುವ ಸಮಯ.

ಪ್ರೀತಿಯಿಂದ ಓದೋಣ ಬಾ ಇದೇ ಸುಸಮಯ.


ಪರೀಕ್ಷೆಗೆ ಅಂಜದಿರು ಕಂದಾ

ಜೊತೆಜೊತೆಯಲಿ ನಾವಿದ್ದೇವಲ್ಲಾ.


Rate this content
Log in

Similar kannada poem from Classics