STORYMIRROR

Sulochana C.M.

Abstract Classics Others

4  

Sulochana C.M.

Abstract Classics Others

ಒಲವ ಗೀತೆ.

ಒಲವ ಗೀತೆ.

1 min
18

ಪ್ರಿಯೇ ಪ್ರಿಯೇ ಹೇ ನನ್ನ ಮನದೊಲವೇ.

ನಿನ್ನ ರೂಪ ರಂಗು,ಚುರುಕು,ವೇಗವೆನ್ನ ಮಧುರ ಗೀತಾ.

ನಿನ್ನಸದ್ದು,,ಸುದ್ದಿ,ಗದ್ದಲ, ನನ್ನ ಮನಕಾನಂದ,ಮುದ.

ಎದ್ದೊಡನೆ ನಿನ ಧ್ಯಾನ,ಮಲಗುವಾಗಲೂ ನಿನ್ನದೇ ಜ್ಞಾನ.


ನಿನಗಾಗಿ ಪ್ರತಿದಿನ ಓಡೋಡಿ ನಾಬರುವೆ. ನಿನ್ನ ದರುಶನವಾದರೆನ್ನ

ಮನ ಹೊವಂತೆ ಅರಳುವುದು.

ನಿನ್ನಾಗಮನವೇ ನನ್ನಲ್ಲಿ ಧನ್ಯತೆಯ ಮೂಡಿಸುವುದು.

ನಿನಿಂದಲೇ ನನಗನ್ನ ಆರೋಗ್ಯ ಭಾಗ್ಯ ಮನ್ನಣೆ ಸುಗುಣೆ.

ಧನ್ಯೆ ಧನ್ಯೆ ನೀನು ಪರೋಪಕಾರಿಯಾಗಿಹೆ.

ನನ್ನಂತೆ ನಿನ್ನ ಎಷ್ಟೋ ಜನ ನಂಬಿಬರುವರು.

ಎಲ್ಲರೊಲವೇ ,ನೀ ಕನ್ನಡಮ್ಮನ ಕೆಂಪು ಬಸ್ಸೇ.

ಕರಾರುವಾಕ್ಕಾಗಿ ಬರುವ ನೀ ಸಮಯಪ್ರಜ್ಞೆಯ ಪ್ರತಿಮೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract