STORYMIRROR

ಹೃದಯ ಸ್ಪರ್ಶಿ

Abstract Tragedy Others

4  

ಹೃದಯ ಸ್ಪರ್ಶಿ

Abstract Tragedy Others

ತಪ್ಪಾದರೂ ಏನು?

ತಪ್ಪಾದರೂ ಏನು?

1 min
394

ಕಾರಣ ಹೇಳದೆ ಬಂದೆ ನೀ

ಕಾರಣ ನೀಡದೆ ನಡೆದೆ ನೀ

ಇಲ್ಲಿ ನನ್ನ ತಪ್ಪಾದರೂ ಏನು?

ಬಂದು ಹೋಗುವ ಆಟದಿ

ನನ್ನ ಪಾತ್ರವಾದರೂ ಏನು..?


ಆಕಸ್ಮಿಕ ಪರಿಚಯ ಹತ್ತಿರವಾದುದೇಕೆ?

ಸಣ್ಣ ಮನಸ್ತಾಪ ಹೆಚ್ಚಾದುದೇಕೆ?

ಒಂಟಿ ಜೀವನ ಹಾಯಾಗಿತ್ತು

ಪರಿಚಯ ಮನಸ್ತಾಪ ಬೇಡವಿತ್ತು


ತಂಪುಗಾಳಿಯು ಸುಡುತಿದೆ

ಮನದ ಬೇಗೆಗೆ ತಂಪನ್ನು ನೀಡಲಾಗದೆ

ಮನದೊಳಗಿನ ಮಾತು ತುಟಿಯ ಸೇರಲಿಲ್ಲ

ತುಟಿಯಲ್ಲಿನ ಮಾತು ದನಿಯಾಗಲಿಲ್ಲ..!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract