ಸಣ್ಣ ಲೇಖನಿ
ಸಣ್ಣ ಲೇಖನಿ
ಮನದಿ ಮೂಡಿದ ಭಾವ ಸರಣಿಯ
ಹೊರತರಲು ಬೇಕು ಸಣ್ಣ ಲೇಖನಿ...
ಕರದಿ ಹಿಡಿದಿರುವ ಖಡ್ಗಕ್ಕಿಂತ ಹರಿತ
ಈ ಸಣ್ಣ ಲೇಖನಿ...
ಬಿಳಿಯ ಹಾಳೆಯ ಮೇಲೆ
ಮೂಡೋ ಅಕ್ಷರಗಳೇ ಭಾವನಾ
ತೋಟದೊಳಗೆ
ಅರಳೋ ಹೂವುಗಳು..
ನೀಲಿಯ ಶಾಹಿ ಮೂಡಿಸೋ
ರೇಖಾಕ್ಷರದಲ್ಲಿ ಅರಳೋ ಚಿತ್ತಾರವೇ
ಈ ಸುಂದರ ಪದಗಳು..
ಬಿಳಿ ಹಾಳೆಯ ಜೊತೆಗೆ ನೀಲಿ
ಶಾಹಿಯ ಮಿಲನ
ಅಕ್ಷರಗಳ ಜನನ....
ಅಕ್ಷರಗಳ ಮಿಲನ ಪದಗಳ ಜನನ..
ಪದಗಳ ಪಠಣ, ಓದೋ ಜನಗಳಲಿ
ಭಾವಗಳ ಜನನ....
