STORYMIRROR

Ramamurthy Somanahalli

Inspirational Children

2  

Ramamurthy Somanahalli

Inspirational Children

ಪುಟ್ಟಾ ಪುಟ್ಟಿ

ಪುಟ್ಟಾ ಪುಟ್ಟಿ

1 min
108

ಪುಟ್ಟಾ ಪುಟ್ಟಿ ಮಳೆಯಲಿ ....

ಆಕಾಶದಿ ಓಡುತಿಹುದು ಕಪ್ಪು ಮೋಡ

ತಂಪು ಕೊಡಲು ಭೂಮಿಗಿಳಿದ ಮಳೆಯ ನೋಡಾ....||೧||


ಗುಡುಗು ಸಿಡಿಲು ಮಿಂಚು ಬರಲು

ಗರಿಗೆದರಿ ಕುಣಿದಾಡಿತು ನವಿಲು

ಚಿಂವ್ ಚಿಂವ್ ಎನ್ನುತ ಮರವನೇರಿತು ಅಳಿಲು

ಗಂಗೆ ಗೌರಿ ಅಂಬಾ ಎನಲು

ಕರುಗಳ ಮುದ್ದಿಸಿ ನೀಡಿತು ಹಾಲು  ||೨||


ಪುಟ್ಟ ಪುಟ್ಟಿ ಮಳೆಯಲ್ಲಾಡುತ

ತೇಲಿಸಿ ಬಿಟ್ಟರು ದೋಣಿಯನು

ಆಡುತ ಹಾಡುತ ಮಳೆಯಲಿ

ನಲಿಯುತ 

ಮರೆತೇ ಬಿಟ್ಟರು ಶಾಲೆಯನು ||೩||


ಚಳಿಯನು ತಾಳದೆ ಚಳಿ ಚಳಿ ಎನ್ನುತ

ಪುಟ್ಟನು ಕೆಮ್ಮುತ ಸೀನಿದನು

ಗಡಗಡ ನಡುಗುವ ಪುಟ್ಟಿಯ ನೋಡಿ 

ಅಜ್ಜಿಯ ಕರೆಯಲು ಓಡಿದನು  ||೪||


ಮಳೆಯಲಿ ತೋಯ್ದರು ನಡುಗುತ ಪುಟ್ಟಾ ಪುಟ್ಟಿ

ಅಜ್ಜಿ ಕೊಟ್ಟಳು ಬೇರಿನ ಚೂರ್ಣವ ಕುಟ್ಟಿ ಕುಟ್ಟಿ

ಮದ್ದನು ಕುಡಿದರು ಮುಖ ಹಿಂಡುತ ಕಷ್ಟದಲಿ

ನಿದ್ದೆಗೆ ಜಾರುತ ಮಿಂಚಿನ ಮಳೆಯ ನೆನಪಿನಲಿ ||೫||


Rate this content
Log in

Similar kannada poem from Inspirational