ಪ್ರಾರ್ಥನೆ
ಪ್ರಾರ್ಥನೆ


ಬರೀ ತೋರಿಕೆಯ ಪ್ರಕ್ರಿಯೆಯಲ್ಲ
ಮೌನರಾಜ್ಯದ ಮೌನವಿದು
ಮನಸ್ಸಿನಾಳದಿಂದ ಹರಿದು ಬರುವ
ಅಂತರಾತ್ಮದ ಮನವಿಯಿದು
ಕಪಟವಿಲ್ಲದ ಭಾವಕೆ
ಸ್ವಾರ್ಥದ ಲೇಪನ ಮಾಡದೆ
ಅಂತರಂಗದಿಂದ ಹೊರಡುವ
ಮನಮಿಡಿಯುವ ಮಾತಿದು
ಪದಗಳಲ್ಲಿ ನಾ ಬರೆಯಲಾರೆ
ಮಾತಿನಲ್ಲೂ ಪ್ರಕಟಿಸಲಾರೆ
ಅನುಭವಿಸಬೇಕಾದ ಸುಂದರ
ಧ್ಯಾನವಿದು...