STORYMIRROR

Ashwini Koushik

Comedy Others

4  

Ashwini Koushik

Comedy Others

ಪಿಟೀಲು

ಪಿಟೀಲು

1 min
1

ಕಮಾನು ಜಾರಿ ತಂತಿಯಮೇಲೆ ಬೆರಳಿನ ದಿಟ್ಟ ಸವಾರಿ

ಮಿಡಿಯಿತು ಆಗ ಹೊಸಬಗೆ ರಾಗ ಸರಿಗಮ ಪಧನಿಸ-ರಿ

ಗಗಗಗ ಗಗಗಗ ಗಗಗಗ ಗಗಗಗ ಗೋಘ್ರದಿ ನುಲಿಯುತ 

ಕುಕ್ಕುತ ಹರಿಸುತ ಉಜ್ಜುತ ಸವರುತ ಕಲಿಯುವ ಸಮಯದಲಿ 


ಗಸಗಸ ಗಸನಿಸ ಎಂದಿತು ಸ್ವರಗಳು ಗರಗಸಧಾರೆಯಲಿ

ಸನಿಧಪ ಮಗರಿಸ ಇಳಿಯುತ ಜಾರಿತು ತೂರಾಟದ ಅಮಲಿನಲಿ

ಸರಿಸರಿ ರಿಗರಿಗ ಸರಿಯುತ ನಡುಗುತ ಕಂಪಿಸಿ ನಿರತದಲಿ

ಸನಿಸಧ ನಿಪ-ಮದದಿಂದಲಿ ಕೂಡಿ ದಾಟಿಸಿ ಅಂದಾಜಿನಲಿ


ನುಡಿಸುತ ಸವೆಸುತ ಸಾಧನೆ ಮಾಡುತ ಮುಂದಿನ ದಿನದಲ್ಲಿ

ಆರಭಿ ಭೈರವಿ ತೋಡಿ - ತೋಡಿ ಗೋಳಾಡುವ ಭಾವದಲಿ

ಹೀಗೆ ಸಾಗಿತ್ತು ಪಿಟೀಲಿನ ಶಿಕ್ಷಣ ನಮ್ಮ ಮನೆಯಲ್ಲಿ 

ಒಂದು ದಿನವೂ ಬಿಡದೆ ಹಗಲು-ರಾತ್ರಿಯಲ್ಲಿ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy