STORYMIRROR

Ashwini Koushik

Inspirational

4.5  

Ashwini Koushik

Inspirational

ಕೃಷ್ಣ ಬಾ! ಬೇಗ ಬಾ!

ಕೃಷ್ಣ ಬಾ! ಬೇಗ ಬಾ!

1 min
7

ಅಮ್ಮನ ಮುದ್ದಿನ ಕಂದನಾಗಿ, 

ತಂದೆಗೆ ಹೆಮ್ಮೆಯ ಪುತ್ರನಾಗಿ, 

ಸೋದರನ ಬಲಗೈಯಾಗಿ, 

ಗೆಳೆಯರ ಆಪ್ತಮಿತ್ರನಾಗಿ, 

ಪ್ರೇಯಸಿಯ ರಹಸ್ಯ ರಸಿಕನಾಗಿ, 

ಹೆಂಡತಿಗೆ ಕಲ್ಪಿತ ಗಂಡನಾಗಿ,

ಆಕರ್ಷಕ ವೃತ್ತಿಪರನಾಗಿ,

ಸಮರ್ಥ ಆಡಳಿತಗಾರನಾಗಿ, 

ಸಲಹೆಗಾರನಾಗಿ, ರಕ್ಷಕನಾಗಿ, 

ಹೃದಯದಲ್ಲಿ ರಾರಾಜಿಸೋ ನಾಯಕನಾಗಿ, 

ಎಲ್ಲವೂ ನೀನಾಗಿ, ಎಲ್ಲರೊಳು ನೀನಾಗಿ, 

ಯುಗಯುಗದ ಪಾತ್ರಕೆ ರೂಪವೇ ನೀನಾಗಿ,

ನೀನೇ ನಾನಾಗಿ, ನನ್ನೊಳಗಿನ ಕೃಷ್ಣನಾಗಿ, 

ಬಾ! ಕೃಷ್ಣ ಬಾ! ಬೇಗ ಬಾ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational