ಸಂತ
ಸಂತ
ಒಮ್ಮೆ
ಸಂತೆಯಲ್ಲಿ ಸಂತ ಹೀಗೆ ಹೇಳಿ ನಿಂತ
ಯಾವುದು ಮಿಗಿಲಿಲ್ಲ ನನಗಿಂತ
ಉಪನಿಷತ್ ಪುರಾಣ ವೇದಾಂತ
ಗುರು ವಸಿಷ್ಠ ವಿಶ್ವಾಮಿತ್ರ
ಬದಲಾಯ್ತು ಚಂಚಲ ಚಿತ್ತ
ಯಾರು ಶತ್ರು ಯಾರು ಮಿತ್ರ
ಯಾವ್ದು ಸರಿ ಯಾವ್ದು ತಪ್ಪಂತ
ತಿಳಿಯಲ್‌ವಲ್ಡೋ ಸರ್ ಅಂತ
ಎಲ್ಲಾ ತನ್ನದೇ ಸ್ವಂತ
ಆದ್ರೂ ಮನಸ್ಸಿಲ್ಲ ಶಾಂತ
ಸದಾ ಆತಂಕ ನಿರತ
ಯೋಗ ಸಂಪೂರ್ಣ ಸ್ಥಗಿತ
ಮತ್ತೆ
ಸಂತೆಯಲ್ಲಿ ಸಂತ ಪ್ರಶ್ನೆ ಕೇಳಿ ನಿಂತ
ಇದೆಲ್ಲಾ ನನಗೆ ಬೇಕಿತ್ತಾ?
ಮುಕ್ತಿಗೆ ದಾರಿ ಎಲ್ಲಂತ
ಇಲ್ಲಿದ್ ಹುಡುಕೋದೇ ಪ್ರಾಯಶ್ಚಿತ್ತ
ಲೌಕಿಕ ಜಗತ್ತಿನ ಹೊಡೆತ
ತಿಂದು ಗೆದ್ದವನೇ ಸಂತ
ಕರ್ಮ ಮಾಡಿದರೆ ಸತತ
ಸಿಗುವನು ಅಂತರಂಗದಲ್ಲೇ ಆ ಭಗವಂತ!
- ಅಶ್ವಿನಿ ಕೌಶಿಕ್
