STORYMIRROR

Ashwini Koushik

Abstract Comedy Others

4  

Ashwini Koushik

Abstract Comedy Others

ಗಾನ ಲಹರಿ

ಗಾನ ಲಹರಿ

1 min
0

ಬುರುಡೆ ಮೇಲೆ ಮೊಣಕೈ ಊರಿ 

ದಂಡನ್ನು ಒರಗಿಸಿ ಕೆನ್ನೆಗೆ ಸವರಿ 

ಮೃದುವಾಗಿ ಮೀಟಿದಳು ತಂಬೂರಿ 

ತನ್ನ ತೊಡೆಯ ಮೇಲಿಟ್ಟು ನಾರಿ!

ಸ್ವಲ್ಪದರಲ್ಲಿ, ಶುರುವಾಯ್ತು ಗಾನ ಲಹರಿ

ಕಣ್ಮುಚ್ಚಿ ಸರಿಗಮ ಪದನಿಸ ರಿ~~~~~~~~

ಎಂದು ಕಿರುಚಿದಳು ದರ್ಬಾರಿ!

ಕೇಳಿದ ಪ್ರೇಕ್ಷಕರು ದಿಕ್ಕಾಪಾಲಾಗಿ ಪರಾರಿ

ಕಣ್ತೆರೆದು ಸುತ್ತಲೂ ನೋಡಿದಳು ನಾರಿ,

"ಯಾರು ಕಿವಿ ಮುಚ್ಚಿದರೂ ಸರಿ,

ನನಗಿಲ್ಲ ಚಿಂತೆ ಕಣ್ರೀ!"

ಎಂದು ಕಣ್ಮುಚ್ಚಿ ಮತ್ತೆ ಮೀಟಿದಳು ತಂಬೂರಿ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract