ನದಿ
ನದಿ
ಸಂಗಮದ ಅಂಚಿನಲಿ ನದಿಗದೇಕೊ ಗಾಬರಿ!
ಹಿಂದಿರುಗಿ ನೋಡಿದಳು ತಾ ಬಂದ ದಾರಿ
ಬೆಟ್ಟಗಳ ಕಣಿವೆಗಳ ಹಳ್ಳಿಗಳ ದಾಟಿ
ಹರಿದು ಸುರಿದು ಭೋರ್ಗರೆದ ಧಾಟಿ
ಅಂತಿಮ ಕಾಲದಲಿ ಸಂದೇಹ ಮನದಲ್ಲಿ
ವೀಶಾಲತೆಯ ಮಡಿಲಲ್ಲಿ ಮರೆಯಾಗುವ ಭಯದಲ್ಲಿ
ಹಿಂದಿರುಗಲಾಗದು ಬೇರೇನು ತೋಚದು
ಮುಂದೆ ಸಾಗುವ ಸೃಷ್ಟಿ ನಿಯಮವದು
ಬಂದಾಗ ಪರಿವರ್ತನೆಯ ಕ್ಷಣ
ಸಾಗರದಿ ಜೀವ ನದಿಗಿಲ್ಲ ಮರಣ
ತಾನೆ ಸಾಗರವೆಂಬ ಸತ್ಯದ ದರ್ಶನ
ಆಗಲು ಮುಂದುವರೆಸಬೇಕೀಪಯಣ !
