STORYMIRROR

Ashwini Koushik

Abstract Fantasy

4.5  

Ashwini Koushik

Abstract Fantasy

ಅನಂತತೆ

ಅನಂತತೆ

1 min
6


ರಾತ್ರಿಗೆ ಚಂದಿರ ಮರಳಿ 

ಬನದಲಿ ಹೂವೆಲ್ಲ ಅರಳಿ

ಕಾದಿದೆ ಕೇಳಲು ಕೃಷ್ಣನ ಮುರಳಿ


ತಂಪಾಗಿ ಬೀಸಿದೆ ಗಾಳಿ

ಎಲ್ಲೆಲ್ಲೂ ಮೌನವ ತಾಳಿ

ಕಾದಿದೆ ಕೇಳಲು ಕೃಷ್ಣನ ಮುರಳಿ


ಕಿತ್ತೊಗೆದು ಕಟ್ಟಿದ್ದ ಸರಳಿ

ಆಕಳು ಬಂದಿದೆ ಬನದ ಬಳಿ

ಕಾದಿದೆ ಕೇಳಲು ಕೃಷ್ಣನ ಮುರಳಿ


ಎಲ್ಲಿ ಕೃಷ್ಣ? ಎಲ್ಲಿ ಆ ವನಮಾಲಿ? 

ಎಲ್ಲಿ ಮುರಳಿಯ ನಾದದ ರವಳಿ?

ಎಲ್ಲಿ ಕೃಷ್ಣ? ಎಲ್ಲಿ ಆ ವನಮಾಲಿ?


ಅಗೋ ಸ್ವಲ್ಪ ಕಿವಿಗೊಟ್ಟು ಕೇಳಿ

ನೋಡಿ! ಇನ್ನೂ ಅಲ್ಲೆ ಇದೆ ಅವನ ಪಾದದ ಧೂಳಿ?

ಎಂದು ನುಡಿಯಿತು ಮುದ್ದಾದ ಗಿಳಿ


ಮತ್ತೆ ಬಾರನೆ ಯಮುನೆಯ ಬಳಿ?

ಮತ್ತಿರದೆ ಆ ತುಂಟನ ಹಾವಳಿ?

ಯಾರಾದರು ತಿಳಿದವರು ಹೇಳಿ !!


ಎಲ್ಲಿ ಕೃಷ್ಣ? ಎಲ್ಲಿ ಆ ವನಮಾಲಿ?

ಕಾದಿದೆ ಎಲ್ಲವು ಸಹನೆಯ ತಾಳಿ 

ಅಲ್ಲೆ ಯಮುನೆಯ ದಡದ ಬಳಿ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract