ಶ್ರವಣ ಕುಮಾರ
ಶ್ರವಣ ಕುಮಾರ
ನೀನ್ ಯಾರಿಗಾದೆಯೋ ಶ್ರವಣ ಕುಮಾರ?
ಬಿಡದೆ ಅಮ್ಮನ ಸೆರಗು
ಬಯಸಿದೆ ಹೆಂಡತಿಯ ಬೆಡಗು
ವಾಲಾಡಿ ಆ ಕಡೆಗೂ ಈ ಕಡೆಗೂ
ನೀನಾದೆ ಹರಿದು ಚೂರಾದ ಹಡಗು
ಅಮ್ಮ ಹೇಳಿದ್ದೇ ಒಂದು,
ಹೆಂಡತಿ ಬಯಸಿದ್ದೇ ಇನ್ನೊಂದು.
ಅಮ್ಮಂಗ್ ಇಷ್ಟ ಆಗೊಲ್ಲ
ಹೆಂಡತಿ ಬಯ್ಯೋದ್ ನಿಲ್ಸಲ್ಲ
ಕಡೆಗೆ ಇಬ್ಬರ ಮಾತು ಕೇಳಲ್ಲ
ನಿನ್ನಿಷ್ಟ ಪ್ರಕಾರಕ್ಕೆ ಇರ್ತೀಯಲ್ಲ?
ನೀನ್ ಯಾರಿಗಾದೆಯೋ ಶ್ರವಣ ಕುಮಾರ?
