STORYMIRROR

Ashwini Koushik

Comedy

4.5  

Ashwini Koushik

Comedy

ಗುನುಗು

ಗುನುಗು

1 min
5

ಗುನುಗೋ ಹಂಬಲ ಮನದಲ್ಲಿ 

ಕೊಟ್ಟಿದ್ದು ಯಾಕೆ ಎಲ್ಲರಲ್ಲಿ

ಏಕಾಂತದಲ್ಲಿ, ಸ್ನಾನದಲ್ಲಿ, ಕಾರಿನಲ್ಲಿ, 

ನೋವಿನಲ್ಲಿ, ನಲಿವಿನಲ್ಲಿ, ಎಲ್ಲಂದರಲ್ಲಿ


ಗುನುಗಿ ಗುನುಗಿ ಗಂಟಲು ಸವೆಸಿ

ಮನದ ಭಾರವ ಸಂಪೂರ್ಣವಾಗಿ ಇಳಿಸಿ

ತಾನೇ ಲತಾ, ತಾನೇ ಕಿಶೋರ್ 

ಎನ್ನುತ್ತಾ ಅತಿರೇಕದಿ ಅರಚಿ ಕಿರಿಚಿ 


Best bathroom singer 

ಎಂದು ಸ್ವಯಂ ಘೋಷಿಸಿ

ನಿಜವಾಗಿಯೇ ಹಾಡಲು ಹಂಬಲಿಸಿ

ಜಗತ್ತನ್ನೇ ಗೆದ್ದಂತೆ ವರ್ತಿಸಿ


ಅಕಸ್ಮಾತ್ ಕೇಳುಗನ ಗತಿ ?
ಅವ ಇಡಬೇಕು ಕಿವಿಯಲ್ಲಿ ಹತ್ತಿ, 

ಇಲ್ಲ silence please ಎಂದು ವಿನಂತಿಸಿ,

ಇರಬೇಕು ಕೇಳಿಯು ಕೆಳದಿರುವ ಹಾಗೆ ನಟಿಸಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy