STORYMIRROR

Ashwini Koushik

Classics

4.5  

Ashwini Koushik

Classics

ರಾಮಾಯಣ

ರಾಮಾಯಣ

1 min
2

ಸೀತೆ ಕಂಡಳು ಚಿನ್ನದ ಹರಿಣ

ಬೇಕೆಂದು ಹಟಮಾಡಿದ ತಕ್ಷಣ 

ಬೇಟೆಗೆ ಹೊರಟರು ರಾಮ ಲಕ್ಷ್ಮಣ!

ಇದೇ ಸಮಯವೇಂದು ಬಂದನು ರಾವಣ

ಪರ್ಣ ಕುಟೀರದಿಂದ ಸೀತಾಪಹರಣ

ಸೀತೆಯ ನೆರವಾದ ಜಟಾಯು ಮರಣ

ವಿರಹದ ಶೋಕದಿ ವೈದೇಹೀರಮಣ

ಸುಗ್ರೀವನು ರಾಮನ ಶರಣ

ಹನುಮನ ಸೀತಾನ್ವೇಶಣ

ಲಂಕೆಗೆ ಕಪಿಸೈನ್ಯದಿ ಸೇತುವೆ ನಿರ್ಮಾಣ

ರಾಮನ ಜೋತೆ ಸೇರಿದ ವಿಭೀಷಣ

ದಶಾನನನ ವೀರ ಮರಣ

ಸೀತೆ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣ

ಇಷ್ಟಕ್ಕೂ ಜಾನಕಿಯ ಆಸೆಯೇ ಕಾರಣ

ಇಷ್ಟೊಂದು ರಗಳೆ ರಾಮಾಯಣ !


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics