Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sonu Imambhai

Romance Others

2  

Sonu Imambhai

Romance Others

ನಯನ

ನಯನ

1 min
125


ಆ ಕಣ್ಣ ಕಂಡೊಡನೆ ನೂರಾರು ಕನಸು

ನಿದ್ದೆಯಲ್ಲೂ ವಾಲುತಿದೆ ನಿನ್ನ ನಯನದೆಡೆಗೆ ಮನಸು...

ಆ ನಯನದ ಆಳದಲ್ಲಿ ಮುಳುಗಿ ಬಿಡುವಾಸೆ ಇಂದು

ಅದೊಂದೆ ಸಾಕು ಈ ಜನುಮಕೆ ಎಂದೆಂದೂ!

ಸಾವಿರಾರು ಕನಸು ಕಣ್ಣಂಚಲಿ ಕುಣಿಯುತಿರಲು...

ಮನಸಲ್ಲೇನೋ ಅರಳು ಮರಳು...

ನೋಡುತ್ತಿದ್ದಂತೆಯೇ ಆ ಕಣ್ಣೋಟ ಸೆಳೆಯಲು...

ಮನಸು ಜಾರಿ ತಲೆ ಬಾಗಿ ಒಪ್ಪಿತು ಸೋಲು....

ಹೊಗಳಲು ಪದಗಳಿಗೆ ಸಿಗದು...

ಹಾಡಲು ರಾಗವೇ ಬರದು...

ಇನ್ನೂ ನೋಡಲು ಹಾಗೇ ನೋಡಲೇಬೇಕು ಎನ್ನುವಷ್ಟು ಸೊಗಸು...

ಹಾಗೆ,ನನ್ನ ಅರಿವಿಲ್ಲದೇ ಕರಗಿ ನೀರಾಯಿತು ಮನಸು....

ಭಾವನೆಗೆ ಬಂದಿವೆ ನೂರಾರು ಶಬ್ದ ಹೊಗಳಲು ಆ ನಯನ...

ಆದರೂ ಅನಿಸುತಿದೆ ಆ ನಯನ ಹೊಗಳುವ ಶಬ್ದಕ್ಕೆ ಇನ್ನು ದೊರೆತಿಲ್ಲ ಜನನ....

ಏನೆಂದು ಹೊಗಳಲಿ ಆ ಕಣ್ಣ ಸೌಂದರ್ಯ??

ಆ ಕಣ್ಣ ಸೌಂದರ್ಯ ಸವಿಯುತ ಮುಳುಗಲು ಮರೆತಿದ್ದಾನೆ ಆ ಸೂರ್ಯ.....!


Rate this content
Log in

Similar kannada poem from Romance