ನನ್ನ ನಲ್ಲ
ನನ್ನ ನಲ್ಲ
ಇವನೇ ನನ್ನ ನಲ್ಲ ಇವನ ಮನಸನ ಯಾರೂ ಬಲ್ಲ!!
ನನ ಮ್ಯಾಲೆ ಪಿರೂತಿ ಐತಿ ಅಂತ ಹೇಳಲೊಲ್ಲ
ತಿದ್ದಿ ತೀಡಿದ ರೂಪ ಇವನದು
ಆದರೆಂದೂ ಜಂಭ ಪಡದು
ಅಮ್ಮ ಅಪ್ಪನ ಮುದ್ದಿನ ಕೂಸು ಇವ
ತುಂಟತನಕೆ ಕೃಷ್ಣನಿಗೆ ಕಿಚ್ಚು ಹಚ್ಚಿದವ
ಬಾಲ್ಯದಲಿ ಬುದ್ಧಿವಂತ
ರೂಪಿನಲ್ಲಿ ಮನ್ಮಥ
ಕಾಯಕವೇ ಕೈಲಾಸ, ಮಾಡೊಲೊಲ್ಲ ವಿಲಾಸ
ನಿಮಗೇನಾದರೂ ತಿಳಿದಿದೆಯೇ ಇವನ ವಿಳಾಸ
ದೇವಸ್ಥಾನಕ್ಕೆ ಹೇಗೆ ಕಳಸವೋ
ಹಾಗೆಯೇ ಇವನ ಕೆಲಸ
ಅಣ್ಣ ಅಕ್ಕರ ನಲ್ಮೆಯ ನನ್ನ ನಲ್ಲ
ಮಗ, ಮಡದಿಯ ಮನಸನು ಬಲ್ಲ
ಸ್ನೇಹ ಪ್ರೀತಿಇದ್ದರೂ ತೋರದ
ಬಂಧು ಬಾಂಧವರ ಗೆದ್ದ
ತಂದೆ ತಾಯಿಯ ನಮಸ್ಕರಿಸಿ
ಮನೆಯೇ ಮಂತ್ರಾಲಯವೆಂದು ಪೂಜಿಸಿ
ತಾನುಂಟು ತನ್ನ ಕೆಲಸವುಂಟು
ಯಾರದೂ ಬೇಡ ನಂಟು
ನೇರ ನಡೆ ನುಡಿಯ ನನ್ನ ನಲ್ಲ
ಇನ್ನು ಬೇರೆ ಏನೂ ನನಗೆ ಬೇಕಿಲ್ಲ

