ನನ್ನ ಬರಹ
ನನ್ನ ಬರಹ


ತೋಚಿದ್ದನ್ನು ಗೀಚುವ ನನಗೆ
ಯಾವ ಬಿರುದಿನ ಆಸೆಯಿಲ್ಲ
ಮನದ ಮಾತುಗಳ ಹೊರ
ಹಾಕುವ ಬಗೆಯಿದು ನನಗೆ..
ಪದಗಳಲಿ ಮಾಲೆ ಕಟ್ಟಲು
ಅದೇನೋ ಖುಷಿ ನನಗೆ
ಅಕ್ಷರಗಳ ಮೆರವಣಿಗೆ ಹೊರಟಿವೆ
ನೋಡು ಸಾಲು ಸಾಲಿನಲಿ
ಮನದ ಭಾವಕೆ ಮುನ್ನುಡಿಯಿದು
ಕನಸಿನ ಲೋಕಕೆ ಕನ್ನಡಿಯಿದು
ಹೊಸ ಹೊಸ ಭಾವ ಕಟ್ಟಿಕೊಡುವೆ
ಕಂಗಳ ಹನಿಗೂ ಹೊಸ ಸಾಲನಿಡುವೆ
ಅದೋ ಅಲ್ಲೊಂದು ನವಿರು ಭಾವ
ಇಗೋ ಇಲ್ಲೊಂದು ಕಹಿ ನೋವ
ಎಲ್ಲವನ್ನೂ ಸೇರಿ ಉದಯಿಸಿದೆ
ನೋಡು ಬಗೆ ಬಗೆಯ ಸಾಲು..!
ಮನದ ಮಹಲಿದು..
ನಾನೇ ಒಡತಿ..
ನನಗಿಲ್ಲ ಇಲ್ಲಿ ಯಾವ ಬೇಲಿ
ನನ್ನಿಚ್ಛೆಯ ಬದುಕಿನ ನವ ರಂಗೋಲಿ..!