STORYMIRROR

Prabhakar Tamragouri

Romance

2  

Prabhakar Tamragouri

Romance

ನಿವೇದನೆ

ನಿವೇದನೆ

1 min
137

ಮೌನ ಅರ್ಥವಾಗುವ ಹೊತ್ತು 

ಎದೆಯೊಳಗೆ ಪ್ರೀತಿ ಸಾಗರದಷ್ಟು 

ನೀ ನಡೆವ ಹಾದಿಯ ತುಂಬಾ 

ನಗುವಂಥ ಹೂವು , ಚೆಲುವು 

ಕಂಡಷ್ಟೂ ಸೊಬಗು .....


ಕನಸ ತಬ್ಬಿಕೊಂಡ 

ಮರದ ಬಳ್ಳಿ 

ಎದೆಯ ತುಂಬಾ 

ಹಕ್ಕಿ ಗೂಡ ಕನಸು 

ಸಾವಿಲ್ಲ ನಿನಗೆ 

ಇಂದಿಗೂ , ಯಾವತ್ತಿಗೂ 

ಯಾಕೋ ಏನೋ ? 

ನಿನಗೆ ಮತ್ತೆ 

ಅರ್ಥವಾಗಬಲ್ಲವ ನಾನು !


ಕಣ್ಣೀರು ನೆನಪ ತರಬಹುದು 

ಆದರೆ , ಕಾಲವನ್ನು 

ಮರಳಿಸಲಾರದು ಬದುಕು 

ಹುಡುಕುವ ದಾರಿ 

ಸಿಕ್ಕಿದ್ದು ಒಂದು ನೆಲೆ !

ನಿಂತ ಈ ಮಣ್ಣ ಕಣಕಣವೂ 

ಜೀವ ಅರಳಿಸುವ ಸೆಲೆ 

ಎಷ್ಟಂತ ಕಾಡುವೆ ?

ಹೀಗೆ ನೆನಪಲ್ಲೇ ಸಾಯಿಸಬೇಡ 

ನನಗೊಂದಿಷ್ಟು ಮಾತು ಕಲಿಸು ...



Rate this content
Log in

Similar kannada poem from Romance