ನಿನ್ನಯ ಸಂಗಡ ತಂಪಿನ ಅಂಗಳ
ನಿನ್ನಯ ಸಂಗಡ ತಂಪಿನ ಅಂಗಳ
ಎಂದು ಕಂಡೆ ನಾನಿನ್ನ ಕಂಗಳ
ನಿನ್ನಯ ಸಂಗಡ ತಂಪಿನ ಅಂಗಳ
ಮರುಳಾದೆ ನಾನದರ ಅಂದ ಚಂದಕೆ
ಘಾಸಿಯಾಯಿತು ಮನ ಆ ನೋಟಕೆ!!
ಚಿಗುರಿತು ಪ್ರೀತಿ ಕಂಡು ಹೂನಗೆ
ಮುತ್ತಿನಂತ ಆ ನಿನ್ನ ಮುಗುಳ್ನಗೆ
ಮಿಂಚಂತೆ ನಾಟಿತು ನನ್ನ ಹೃದಯಕೆ
ಸರಿಗಮ ಒಟ್ಟಾಗಿ ಚೆಲ್ಲಿತು ಈಮನಕೆ!!
ಗುಲಾಬಿಯಂತೆ ಅಂದ ನಿನ್ನ ಕೆನ್ನೆಯೂ
ದಾಳಿಂಬೆಯಂತೆ ಆ ನಿನ್ನ ತುಟಿಯೂ
ಜೇನಿನ ಮಧುರ ರಸವದಕೆ ಸವರಿದೆ
ಸಿಹಿಮುತ್ತ ನೀಡಿದಾಗ ಸ್ವರ್ಗ ಇಲ್ಲಿದೆ!!

