ಮುದ್ದು ಗಣಪ
ಮುದ್ದು ಗಣಪ
ಬಾ ಬಾ ಗಣಪ
ನಮ್ಮ ಪುಟ್ಟ ಗಣಪ
ಬಾರೋ ನಮ್ಮನೆಗೆ
ಮೋದಕ ಕಡುಬು
ಚಕ್ಕುಲಿ ಕಜ್ಜಾಯ
ಕೊಡುವೆ ನಾ ನಿನಗೆ!!
ಚೌತಿಯ ದಿನದಿ
ಬರುವೆ ನೀನು
ಕುಳಿತಿರುವೆ ನೀನು
ಪ್ರಕೃತಿಯ ಮಡಿಲಲ್ಲಿ
ನಿನ್ನನು ಕಂಡರೆ
ಅಕ್ಕರೆಯು ನಮಗೆ !!
ಮುದ್ದು ಮುದ್ದು ಗಣಪ
ಬಾರೋ ನಮ್ಮನೆಗೆ
ಕೈಯನು ಮುಗಿವೆ
ವರವನು ಕೊಡು
ಬೇಡುವೆನು ನಾನು
ಹರಸು ನಮ್ಮನು!!
ವಿದ್ಯಾ ಬುದ್ದಿಯನು
ಸದಾ ಕರುಣಿಸುತ್ತಾ
ಕರುಣೆಯ ನೀಡೆಮಗೆ
ನಾವು ಮಾಡಿರುವ
ತಪ್ಪನು ಮನ್ನಿಸುತ್ತಾ
ಸನ್ಮಾರ‍್ಗವ ತೋರೆಮಗೆ!!
ಸುಂದರ ಧರಣಿಯ
ರಮಣೀಯ ಪರಿಸರ
ಉಳಿಸಲು ಬುದ್ದಿಯ ನೀಡು
ನಿನ್ನ ದಯೆಯು ನಮಗಿರಲಿ
ಎಲ್ಲರು ಒಂದೇ ನಿನ್ನಯ ಮುಂದೆ
ಕಾಪಾಡು ನಮ್ಮನೆಂದೆಂದೂ!!