STORYMIRROR

Gireesh pm Giree

Romance Thriller Others

4  

Gireesh pm Giree

Romance Thriller Others

ಮರೆಯಾದೆ

ಮರೆಯಾದೆ

1 min
246

ಬಯಸದೆ ಬಳಿ ಬಂದೆ ನೆನೆಸದೆ ನೀ ಹೋದೆ

ಅರಿಯದೇ ನಿನ್ನ ಅರಿತೆ ಅರಿತು ನಾ ಸೋತೆ

ನಿನ್ನ ಪವಿತ್ರ ಪ್ರೀತಿಯೆಂದು ಮರುಳಾದೆ

ಆದರೆ ಅದು ಮೋಸದ ಮಾಯೆಯೆಂದು ಅರಿಯದೆ ಸೋತೆ


ಸುಳ್ಳು ಪ್ರೇಮವೇ ನೀ ನನ್ನ ಬಾಳಿಗೆ ಕೊಳ್ಳಿಯಿಟ್ಟೆ

ನನ್ನೆಲ್ಲಾ ಕನಸನ್ನು ಅರೆಕ್ಷಣದಲ್ಲಿ ಕೊಂದುಬಿಟ್ಟೆ

ಈ ಪ್ರೀತಿಯ ಸೆಲೆಗೆ ಅಲೆಗೆ ತತ್ತರಿಸಿ ಕೆಟ್ಟೆ

ಬಾಳ ಕೊನೆತನಕ ಇರುವೆನೆಂದು ಸುಮ್ನೆ ನಿನ್ನ ಇಷ್ಟಪಟ್ಟೆ


ಹುಚ್ಚು ಕುದುರೆಯ ಹಿಂದೆ ಹೋದನೆಂಬ ಪಶ್ಚಾತಾಪ

ವಿಧಿಯ ಹಣೆಬರಹವು ನನಗೆ ಕೊಟ್ಟಿತೇ ಶಾಪ

ಅರಿತೆ ಇದರಿಂದ ಹೊಸದೊಂದು ಪಾಠ

 ಬದುಕಲ್ಲಿ ಬೇಡ ಸುಮ್ನೆ ಹುಡುಗಾಟ ಅಲೆದಾಟ


ಯಾರನ್ನು ಅತಿಹೆಚ್ಚು ನಂಬಬೇಡಿ ನಂಬಿ ಕೆಡಬೇಡಿ

ನಂಬಿಕೆಯು ಅಂತವರಿಗೆ ಆಟದ ವಸ್ತುವೆಂದು ಮರಿಬೇಡಿ

ಸುಗಮ ವಾಗಿರಬೇಕಿದ್ದರೆ ನಿಮ್ಮ ಜೀವನ

ಸುಳ್ಳು ಪ್ರೀತಿಯ ನಂಬದಿದ್ದರೆ ಪಾವನ


Rate this content
Log in

Similar kannada poem from Romance