ಆ... ಇರುಳ ಏಕಾಂತದಲಿ
ಆ... ಇರುಳ ಏಕಾಂತದಲಿ
ಮನದಲ್ಲೇ ನಿನ್ನೊಂದಿಗೆ ಮಾತನಾಡಿ
ಕನಸಲ್ಲಿ ಅರಳಿದ ಅಕ್ಕರೆಯ ಹಂಚುವೆ
ನಿನ್ನೊಲವಿನ ಆ ಇರುಳ ಏಕಾಂತದಲಿ
ನೆನಪುಗಳ ಸವಿಯೊಂದಿಗೆ ಆನಂದಿಸುವೆ!!
ಅಲೆಯುತ್ತಾ ನಾ ಬಂದು ಅತ್ತ ಇತ್ತ ದಾರಿಯ
ಮರೆತು ನನ್ನ ಹೃದಯದಿ ಬಂದು ನೆಲೆಸಿರುವೆ
ನಾನೆಲ್ಲೇ ನಿಂತರು ನಡೆದುಕೊಂಡು ಹೋದರು
ನಿನ್ನ ಮುದ್ದಾದ ಪಿಸುದನಿಯ ಕೇಳುತಿರುವೆ!!
ಸದ್ದಿಲ್ಲದೇ ಮನಸಲ್ಲೇ ಮನೆ ಮಾಡಿದ ನಿನ್ನ
ನನ್ನೆದೆಗೂಡಲಿಟ್ಟು ಜೋಪಾನ ಮಾಡುವೆ
ಮೌನವಾಗಿ ಹುಟ್ಟಿದ ನನ್ನ ಪ್ರೇಮ ಕಾವ್ಯವ
ನಿನಗೆಂದೇ ನಾ ಹಾಡಲು ಕಾದು ಕುಳಿತಿರುವೆ!!
ಮೈಮನಗಳಲ್ಲಿ ತುಂಬಿ ಆವರಿಸಿರುವ ನಿನಗೆ
ಪ್ರೀತಿಯ ಆಹ್ವಾನ ಕಳುಹಿಸುವ ಕಾತರ ನನಗೆ
ನಿನ್ನ ಪ್ರತಿ ಉಸಿರಲ್ಲೂ ಉಸಿರಾಗಿ ನಾನಿರುವೆ
ಹೃದಯ ಬಡಿತದ ಸುಮವಾಗಿ ನಾ ಅರಳುವೆ!!

