ಹೆಸರು.
ಹೆಸರು.
ಕಾದಿರುವೆ ನಾನು ಲೇಖನಿಯ ಹಿಡಿದು
ಗಗನದ ಮೇಲೆ ಬರೆಯಲು ನಿನ್ಹೆಸರು,
ಕನವರಿಸುತಿರುವೆ ಹಳೆ ಕನಸ ಬಿಗಿದು
ಒಲವ ನೋಟದಿ ಒಮ್ಮೆ ಸೇರಲಿ ಉಸಿರು!
ಯುಗ ಯುಗಗಳಿಂದ ಕಾಡಿದ್ದ ನೆನಪದು
ಜೊತೆ ಬಾಳುವ ಬಂಧನದ ನಿಜ ಕರಾರು,
ಹೆಸರುಸಿರಿನ ಮಿಲನ ಮಹೂರ್ತದಂದು
ಕೈಜಾರಿ ಹೋಗಿದ್ದ ಅವಕಾಶಗಳು ನೂರಾರು!
ಮತ್ತೀಗ ಕಾಮನ ಬಿಲ್ಲಿನ ಗೆರೆಗಳನು ಎಳೆದು
ಶಾಯಿಯಾಗಿ ತುಂಬಿಸುತ ಮಳೆಯ ನೀರು,
ನೀಲ ಹಾಳೆಯ ಮೇಲೆ ಮೋಡಗಳ ಬೆಸದು
ಬರೆದಿಡುವೆ ನಲ್ಲಾ, ನನ್ನ-ನಿನ್ನ ಜೋಡಿ ಹೆಸರು!

