ನನ್ನ ಮನಸು.
ನನ್ನ ಮನಸು.
ನನಗೂ ಒಂದು ಮನಸಿದೆ,. ಅದರೊಳಗೆ ಪುಟ್ಟ ಕನಸಿದೆ
ಕನಸಿಗೆ ನೀ ಕಟ್ಟಿದ ರೆಕ್ಕೆ ಇದೆ.
ರೆಕ್ಕೆ ಬಿಚ್ಚಿ ವಿಶಾಲ ಲೋಕದಲ್ಲಿ ಹಾರುವ ಬಯಕೆ ಇದೆ,
ಕಂಗಳಲಿ ಹೊಸ ಮಿಂಚಿನ ಹೊನಲಿದೆ,
ಅದರಲ್ಲೇ ನಾ ಸೆಳೆದು ಹೋಗಿಹೆ,
ಆದರೂ ಬಂದಾಗ ನೀ ಕಣ್ಣ ಮುಂದೆ,
ಮರೆತೆಲ್ಲ ನನ್ನಾಸೆಯನ್ನು,
ಕಳೆದು ಹೋದೆನು ನಾನು ನಿನ್ನ ಒಳಗೆ,
ದಿನಗಳೆಲ್ಲಾ ಕಳೆದೆವು, ಒಂದಾಗಿ ಬೆರೆತೆವು,
ನಿನ್ನೊಳಗೆ ನಾನು ನನ್ನ ಬದುಕನ್ನೇ ಮರೆತೆನು,
ನೀನೇ ಕಟ್ಟಿದ್ದ ರೆಕ್ಕೆ ಹಾರಲಿಲ್ಲ ಮುಂದೆ ಮುಂದೆ,
ಬಂದಿಯಾಗಿ ನಿನ್ನ ಒಲವ ಪಂಜರದಲೆ ಕಳೆದೆನು,
ಮತ್ತೆ ನನ್ನ ತನವ ನೆನಸಿ, ನನ್ನ ಮನಕೆ ಸ್ಪೂರ್ತಿ ತುಂಬಿ,
ಮತ್ತೆ ಹಾರೋ ಆಸೆ ನನಗೆ, ನೀನೇ ತಂದು ಕೊಟ್ಟೆ,
ನಿನಗೂ ಒಂದು ಮನಸು ಇದೆ, ಕನಸು ಬಾನಿನಾಚೆಗಿದೆ,
ಹಾರಿ ನಿನ್ನ ಗುರಿಯ ಮುಟ್ಟು, ಜೊತೆಯಲಿರುವೆ ಎಂದಿಹೇ,
ಇಂದು ನಾನು ಹಾರುತಿಹೆನು, ಗುರಿಯ ಕಡೆಗೆ ಸಾಗುತಿಹೆನು,
ಜೊತೆಗೆ ನಿಂತು ರೆಕ್ಕೆ ಕಟ್ಟಿದವನ ಕಡೆಗೆ ನೋಡುತ,
ನಿನ್ನ ಜೊತೆಗೆ ಎಂದೂ ನಾನು,
ನನ್ನ ಜೊತೆ ಎಂದೂ ನೀನು ಜೋಡಿಯಾಗಿ ಸಾಗುವ,
ನಮ್ಮ ಗುರಿಯ ಸೇರುವ..

