ಹಾಡೋಣ ಬಾ ಗೆಳೆಯ
ಹಾಡೋಣ ಬಾ ಗೆಳೆಯ
ಹಾಡೋಣ ಬಾ ಗೆಳೆಯ ಪ್ರಣಯರಾಗ
ಕುಣಿಯೋಣ ಹೃದಯದೊಡೆಯ ಸೇರಿ ಈಗ
ಪ್ರೀತಿಯ ಮತ್ತನ್ನು ಉಣಿಸಿದೆ ನೀನು
ಪ್ರೀತಿಸು ನೀನು ಬಾರೋ.... ಚೆಲುವ ನೀನು ಬಾರೋ....!!
ಬಾಳ ಸರಿಗಮದಿ ನೀ ರಾಗವಾದೆ
ನನ್ನುಸಿರು ಉಸಿರಲ್ಲಿ ನೀ ಐಕ್ಯವಾದೆ
ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುವೆ ನಿನ್ನ
ಪ್ರೇಮಿ ನೀನು ಬಾರೋ....ಮನಸ ನೀಡು ಬಾರೋ....!"
ಬೆಳದಿಂಗಳಂತೆ ನೀ ತೋರಿದೆ ಬೆಳಕ
ನೀ ಸನಿಹ ಬರುತಿರಲು ಮೈಯೆಲ್ಲ ಪುಳಕ
ಬಾಳೋಣ ಜೊತೆಯಾಗಿ ನಾವು
ಕನಸ ನೀಡು ಬಾರೋ....ನನಸ ಮಾಡೋಣ ಬಾರೋ...!!

