ನಿನ್ನಂದ
ನಿನ್ನಂದ
ನನ್ನ ಸನಿಹ ನೀನು ಬರಲು
ನನ್ನ ಮಾತೇ ಮೌನವಾಯಿತು
ನಿನ್ನ ನಯನಗಳ ನೋಡುತಿರಲು
ನನ್ನ ಮನಸೇ ಕರಗಿಹೋಯಿತು!!
ನಿನ್ನ ನಗುವ ಕಂಡ ಕ್ಷಣವು
ನನ್ನ ಮನವು ನಿನ್ನದಾಯಿತು
ನಿನ್ನ ಸುಂದರ ದೇಹವ ಹೊಗಳಲು
ಪದಗಳೇಕೋ ಬಾರದೆ ಹೋಯಿತು!!
ಒಂದೇ ಒಂದು ಬಾರಿ ನನ್ನ ಸೇರಿ
ಹೃದಯ ಮಿಡಿತವ ಕೇಳು ಬಾರೆ
ನನ್ನ ಮೌನದಾ ಕವಿತೆಯಲಿ
ಪದಗಳಾಗಿ ಬೆರೆಯಲು ನೀ ಬಾರೆ!!
ಹೇಳು ನೀನು ಒಂದೇ ಒಂದು ಮಾತು
ಬಂದು ಅಪ್ಪಿಕೊಂಡು ಸೇರುವೆನೆಂದು
ಆ ಕ್ಷಣವೇ ನನ್ನೀ ಹೃದಯ ಬರೆದುಕೊಟ್ಟು
ನಿನ್ನ ಸನಿಹದಲಿರುವೆ ನಾನೆಂದೆಂದೂ!!

