STORYMIRROR

manjula g s

Romance Inspirational Others

4  

manjula g s

Romance Inspirational Others

ಅನುಬಂಧ

ಅನುಬಂಧ

1 min
350

ಹೂವೆದೆಯ ಅಂತರಾಳದ 

ಆ ಮಕರಂದ, 

ಹೀರ ಬರುವ ದುಂಬಿಗೆ 

ನೀಡಿದೆ ಆನಂದ! 


ಇಳೆಗೆ ಕಳೆಗೊಡುವ 

ಆ ಸೂರ್ಯನಿಂದ,

ಪುಳಕಿತ ಜೀವಸಂಕುಲ 

ನಲಿವುದು ಚೈತನ್ಯದಿಂದ! 


ಬರಡಾಗಿ ಕಾದ ನೆಲಕೆ 

ಕಾರ್ಮೋಡದ ಕೃಪೆಯಿಂದ, 

ಸಾಂತ್ವಾನದ ಮುನ್ನುಡಿ

ಚಿಟಪಟ ಸದ್ದಿನಿಂದ! 


ಕಡಲೊಳಗೆ ಸೇರುವ 

ಸ್ವಾತಿ ಹನಿಗಳಿಂದ, 

ಸಂಪಧ್ಭರಿತವಾಗುವುದು 

ಕಪ್ಪೆ ಚಿಪ್ಪು ಮುತ್ತಿನಿಂದ! 


ನಲ್ಲಾ... ಅಂತೆಯೇ ಎನ್ನೊಳಗೆ 

ನೀ ಕಾಪಿಟ್ಟ ಒಲವಿನಿಂದ, 

ಜನ್ಮ ಜನ್ಮಕ್ಕೂ ಬಿಡಿಸದಾಗಿದೆ 

ನಮ್ಮ ಈ ಅನುಬಂಧ! 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance