ನನ್ನೊಡತಿ..
ನನ್ನೊಡತಿ..
ನನ್ನೊಡತಿ ಅವಳು
ನನ್ನೆದೆ ಬಾಗಿಲಲಿ
ಕಾತರದಲಿ ನಿಂತವಳು
ಸವಿಜೇನ ಕೊಟ್ಟವಳು
ಪ್ರೀತಿಯ ಹೃದಯದಿ
ಒಡಲಿನ ಕಡಲಲಿ
ಮಮತೆಯ ಮಡಿಲಲಿ
ಕಂದಮ್ಮನಾದವಳು
ಚಂದಿರ ಮಂದಿರದಲಿ
ಚಂದನ ತೇಯುತಾ
ಮನೆಮನಬೆಳಗಲು
ಬದುಕನೇ ಸವೆದವಳು
ಬೆವರಿನ ನಡುವೆಯೂ
ಪ್ರೀತಿಯ ಬೆರೆಸುತಾ
ಗಂಡನ ಎದೆಯಲೀ
ಲೀನವೇ ಆದವಳು
ನನ್ನೆದೆಯ ಗೂಡಲ್ಲಿ
ಇವಳ ಬಚ್ಚಿಡುವೆ
ಜೊತೆಯಾಗಿ ಕಡೆತನಕ
ನಾ ಕಾವಲಿರುವೆ.
ನನ್ನೆದೆ ಗೂಡಲಿ
ಪ್ರಾಣವೇ ಆಗುತಾ
ಹಾಡುತ ಹಾರದೆ
ಉಳಿದವಳು..
ಉಳಿಸಿದವಳು

