ಮಧುರ ಕವಿತೆ ನೀನಾದೆ
ಮಧುರ ಕವಿತೆ ನೀನಾದೆ
ನೀನ್ಯಾರೊ ನಾನ್ಯಾರೊ ಮುಖ ಪರಿಚಯವಿಲ್ಲ
ನಮ್ಮಿಬ್ಬರಿಗೂ ನೆಂಟಸ್ತನದ ಬಂಧವಿಲ್ಲ
ಆದರೂ ಅದೇನೋ ಅರಿಯದ ಆಕರ್ಷಣೆ
ನನ್ನ ನಿನ್ನ ಬಾಂಧವ್ಯದ ಮುದ್ದು ಪೋಷಣೆ!!
ಕಳೆದಂತೆ ದಿನಗಳು ಗೆಳೆತನದಲ್ಲಿ ಹತ್ತಿರವಾದೆವು
ಕಾಲ ಸರಿದಂತೆ ಪ್ರೀತಿ ಮಮತೆಯ ಕಂಪು ಹರಡಿ
ಸ್ನೇಹದ ಪರಿಧಿಯ ದಾಟಿ ಬೆಳಕು ಮೂಡಿ
ನನ್ನ ಬಾಳಲ್ಲಿ ಮಧುರ ಕವಿತೆ ನೀನಾದೆ!!
ಅರಳುವ ತಾವರೆಯಂತೆ ನಗುವಿರಲಿ ಸದಾ ಕಾಲ
ನಿನ್ನ ಮುಗ್ದ ಮೊಗದ ತುಂಬಾ ಇರಲಿ ಆ ತುಂಟತನ
ನಮ್ಮಿಬ್ಬರ ಸ್ನೇಹದಿ ಒಲವು ತುಂಬಿರಲಿ ಚಿರತ್ಕಾಲ
ನೋವಿರಲಿ ನಲಿವಿರಲಿ ಗಟ್ಟಿಯಾಗಿರಲ್ಲಿ ಬಂಧನ!!

