ಪ್ರೀತಿ ಮಳೆ
ಪ್ರೀತಿ ಮಳೆ
ಆ ಮೊದಲ ಗಳಿಗೆಗಳಲ್ಲಿ
ಗೊಂದಲ ತುಂಬಿದ ಮನದಲ್ಲಿ
ಬಯಕೆಗಳ ಹೊತ್ತ ಹೃದಯದಲ್ಲಿ
ಮೊದಲ ಪ್ರೀತಿಯ ಹನಿ ಜಾರುವ ಹೊತ್ತಲ್ಲಿ!!
ಎದೆಯ ಬಡಿತ ಏರುತಿದೆ
ಆವೇಗದ ವೇಗ ಕೈಗೆ ಸಿಗದೆ
ಹುಚ್ಚು ಮನಸ್ಸಿನ ಬಯಕೆಯ
ತೊರೆ ರಾಕೆಟ್ಟಿನಂತೆ ಹಾರಿದೆ!!
ನರನರಗಳಲ್ಲಿ ರಕುತ ಧುಮ್ಮಿಕ್ಕುತ್ತಿದೆ
ನಿನ್ನ ಮನದಲ್ಲಿ ನೆನೆದು ನೆನೆದು
ಸಾವರಿಸಿ ಕೊಂಡು ಏಳಲಾಗದೆ
ನರಳುತಿಹೆನು ಹಿತವಾಗಿ ನಿನ್ನ ನೆನೆದು!!
ಮತ್ತೆ ಬಾ ಮನದ ಅಂಗಳಕ್ಕೆ
ಬೇಡಿಕೊಳ್ಳುವೆ ನರಳಿಸು ಹಿತವಾಗಿ
ಪ್ರೀತಿಯ ಮಳೆಯಲ್ಲಿ ನೆನೆಸು,ವಿರಹದಿ ಬೇಯಿಸು
ಪ್ರೀತಿಯ ಒಲೆಯ ಮೇಲೆ ಮಿತವಾಗಿ!!

