STORYMIRROR

ಹೃದಯ ಸ್ಪರ್ಶಿ

Abstract Classics Others

4  

ಹೃದಯ ಸ್ಪರ್ಶಿ

Abstract Classics Others

ಮನಸೇ...

ಮನಸೇ...

1 min
430

ಮನಸೇ ನೀ ಹೇಳು ಒಂದು ಸಾರಿ

ನಾ ಕೇಳಬೇಕು ನಿನ್ನೆಲ್ಲಾ ನೋವು ಒಂದು ಬಾರಿ


ನಿನ್ನೀ ಬೇಸರಕ್ಕೆ ಕಾರಣ ಏನು?

ಮಾತೆಲ್ಲಾ ಮರೆತು ಮೌನವಾಗಿರುವೆಯೇನು?


ನಿನ್ನೀ ಅಳು ಯಾರಿಗೂ ಕೇಳಲಿಲ್ಲ

ನಿನ್ನೀ ನೋವು ಯಾರಿಗೂ ಕಾಣಲಿಲ್ಲ


ಏಕಿಷ್ಟು ನೀ ನೊಂದಿರುವೆ?

ಒಳಗೊಳಗೇ ಬಿಕ್ಕಿ ಬಿಕ್ಕಿ ಅಳುತಿರುವೆ


ನಿನ್ನ ಸ್ಪಂದನೆಗೆ ಪ್ರತಿ ಸ್ಪಂದನೆ ಸಿಗದಿರೆ ಸುಮ್ಮನಿರು

ಇನ್ನೆಂದೂ ಅವರ ಗೋಜಿಗೆ ಹೋಗದಿರು


ಇಷ್ಟೊಂದು ನೋವ ನುಂಗಿ 

ಸುಮ್ಮನಿರುವೆ ಯಾಕೆ?

ತಿರುಗಿ ಅವರಿಗೂ ಒಮ್ಮೆ ನೀ

ನೋಯಿಸಬಾರದೇಕೆ?


ನೀಡಿ ಬಿಡೊಮ್ಮೆ ಪ್ರತ್ಯುತ್ತರ

ಅವರಿಗೂ ಅರಿವಾಗಲಿ ನಿನ್ನ ನೋವಿನ ಆಳ..


ಯಾವುದಕ್ಕೂ ಬಾಗದಿರು

ನೀನು ನೀನಾಗಿರು..

ಎಲ್ಲರಲೂ ಪ್ರೀತಿ ಕಾಣುತಿರು

ಒಳ್ಳೆಯದನ್ನೇ ಸದಾ ಬಯಸುತಿರು...



Rate this content
Log in

Similar kannada poem from Abstract