STORYMIRROR

Gireesh pm Giree

Children

2  

Gireesh pm Giree

Children

ಮಳೆ

ಮಳೆ

1 min
126

ಆಗಸದಿ ಕಾರ್ಮೋಡ ಶೃಂಗಾರವು ಭುಮಿಯ ಭಯ ಪಡಿಸಲು

ಅಂಬರದಿ ಗುಡುಗಿನ ಸದ್ದು ಪರಿಸರವ ನಡುಗಿಸಲು

ಬಾನಿಂದ ದಾರಿಗೆ ಚಿಮ್ಮಿತು ಮುತ್ತಿನ ಹನಿಯ ಸ್ಪರ್ಶ

ಇಡೀ ಪರಿಸರದ ತುಂಬಾ ಮೂಡಿತು ಹರ್ಷ 


ಮೊದಲ ಮಳೆಗೆ ಇಳೆಯಾಯಿತು ತಂಪು

ಎಲ್ಲೆಲ್ಲೂ ಮಣ್ಣಿನ ಸೊಗಡಿನ ಕಂಪು

ಮಕ್ಕಳಿಗಂತೂ ದೋಣಿ ಬಿಡುವ ಆತುರ

ಅದು ಹೇಗೆ ಮುಂದೆ ಸಾಗುತ್ತದೆ ಎಂಬ ಕಾತುರ


ಮಳೆಯಲ್ಲಿ ನೆನೆಯುವುದೇ ನನಗೊಂದು ಹಬ್ಬ

ಆಗ ಅಮ್ಮ ಅಂಗಳಕ್ಕೆ ಬಂದರೆ ಅಯ್ಯೋ ಅಬ್ಬಬ್ಬಾ

ಬೀಳುತ್ತಿತ್ತು ಬಿಸಿಬಿಸಿ ಕಜ್ಜಾಯ

ಈಗಲೂ ಆ ನೆನಪೇ ನನ್ನೊಳಗೆ ಸದಾ ತನ್ಮಯ


ಅಮ್ಮ ಮಾಡಿದ ಪೋಡಿ ಚಹಾದ ರುಚಿ

ಮಳೆಗಾಲದಲ್ಲಿ ಇಮ್ಮಡಿಯಾಯಿತು ಆ ರುಚಿ

ಕೆಂಡದಲ್ಲಿ ಸುಟ್ಟ ಗೆಣಸಿನ ಸವಿಯುವ ಬಾಯಿ

ಧನ್ಯೋಸ್ಮಿ ನಿನಗಿದು ನನ್ನಯ ತಾಯಿ 


Rate this content
Log in

Similar kannada poem from Children